ದೇಶದಲ್ಲೇ ಅತಿ ಹೆಚ್ಚು ಸಾಲಗಾರನಾದ ಪಂಜಾಬ್ ನ ರೈತ: ಇದಕ್ಕೆ ಕಾರಣವೇನು ಗೊತ್ತಾ..?
ಕಳೆದ ವರ್ಷ ಪಂಜಾಬ್ ರಾಜ್ಯವು ಸರಾಸರಿ ಎರಡು ಲಕ್ಷ ಮೂರು ಸಾವಿರ ರೂಪಾಯಿ ಸಾಲದೊಂದಿಗೆ ದೇಶದಲ್ಲಿ ಮೂರನೇ ಸ್ಥಾನದಲ್ಲಿತ್ತು. ಆದರೆ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಪಂಜಾಬ್‌ನ ರೈತ, ದೇಶದಲ್ಲೇ ಅತಿ ಹೆಚ್ಚು ಸಾಲಗಾರನಾಗಿದ್ದಾನೆ. ಸದ್ಯ ಪಂಜಾಬ್ ರೈತನೊಬ್ಬ ಸರಾಸರಿ 2 ಲಕ್ಷ 95 ಸಾವಿರ ರೂಪಾಯಿ ಸಾಲ ಹೊಂದಿದ್ದಾನೆ.
ಪಂಜಾಬ್ನಲ್ಲಿ ಹುಟ್ಟಿದ ಮಗು ಬೆಳೆದಂತೆ ವಿದೇಶಕ್ಕೆ ಹೋಗುವ ಕನಸು ಕಾಣುತ್ತದೆ. ಈ ಪೈಕಿ ಹೆಚ್ಚಿನವರು ರೈತರ ಮಕ್ಕಳೇ ಆಗಿದ್ದಾರೆ. ತಮ್ಮ ಮಕ್ಕಳ ವಿದೇಶದ ಕನಸನ್ನು ನನಸು ಮಾಡಲು ರೈತ ಪೋಷಕರು ಮುಂದಾಗುತ್ತಾರೆ. ಮನೆಯಲ್ಲಿ ಏನೇ ಸಮಸ್ಯೆಗಳಿದ್ದರೂ ಮಕ್ಕಳ ಭವಿಷ್ಯಕ್ಕಾಗಿ ಏನನ್ನೂ ಮಾಡಲು ಸಿದ್ಧರಿರುತ್ತಾರೆ.
ಹೀಗಾಗಿ ರೈತ ಪೋಷಕರು ಬ್ಯಾಂಕ್‌ಗಳು, ಲೇವಾದೇವಿದಾರರು ಅಥವಾ ಇತರ ಖಾಸಗಿ ಹಣಕಾಸು ಸಂಸ್ಥೆಗಳಿಂದ ದೊಡ್ಡ ಪ್ರಮಾಣದ ಬಡ್ಡಿಯೊಂದಿಗೆ ಸಾಲ ಪಡೆದುಕೊಳ್ಳುತ್ತಾರೆ. ಆ ಮೂಲಕ ಮಕ್ಕಳ ಬದುಕನ್ನ ಹಸನಾಗಿಸಲು ಪೋಷಕರು ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಅಲ್ಲದೇ ಇದನ್ನು ತೀರಿಸಲು ಪ್ರತಿ ವರ್ಷ ಬೆವರು ಸುರಿಸಿ ಬೆಳೆದ ಬೆಳೆಯನ್ನು ಸಾಲದಾತರಿಗೆ ನೀಡುತ್ತಾರೆ.
ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಲಾದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ವರದಿಯ ಪ್ರಕಾರ, 1997 ರಲ್ಲಿ ಸರಾಸರಿ 5,700 ಕೋಟಿ ರೂ.ಗಳಿದ್ದ ರೈತರ ಒಟ್ಟು ಸಾಲವು 2002 ರಲ್ಲಿ 9,886 ಕೋಟಿ ರೂ.ಗೆ ಏರಿಕೆಯಾಗಿತ್ತಯ. ಈ ಸಾಲದ ಮೊತ್ತವು 2005 ರಲ್ಲಿ 21,064 ಕೋಟಿ ರೂ. ಮತ್ತು 2015ರಲ್ಲಿ 35,000 ಕೋಟಿ ರೂ.ಗೆ ಏರಿಕೆಯಾಗಿತ್ತು. ಕಳೆದ ಎಂಟು ವರ್ಷಗಳಲ್ಲಿ ಈ ಅಂಕಿ ಅಂಶವು 74 ಸಾವಿರ ಕೋಟಿಗೆ ಏರಿಕೆಯಾಗಿದೆ.
ಈ ಅಂಕಿಅಂಶಗಳು ಸಹಕಾರಿ ಬ್ಯಾಂಕ್‌ಗಳದ್ದಾಗಿದೆ. ಅಲ್ಲದೇ ಕಮಿಷನ್ ಏಜೆಂಟ್ ಮತ್ತು ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿಗೆ ರೈತರು ಸಾಲ ಪಡೆಯುತ್ತಾರೆ. ಈ ಸಾಲವೂ ಸೇರಿದರೆ ಒಂದೂವರೆ ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಪಂಜಾಬ್‌ನ ಪ್ರತಿ ರೈತನಿಗೆ 2.95 ಲಕ್ಷ ರೂಪಾಯಿ ಸಾಲು ಇದ್ದು, ಇದು ರಾಷ್ಟ್ರೀಯ ಸರಾಸರಿ ಸಾಲ 74,121 ರೂಪಾಯಿಗಳಿಗಿಂತ ಹೆಚ್ಚು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw