ಭಾರತದಿಂದ ಕಳ್ಳಸಾಗಣೆಯಾಗಿದ ಪುರಾತನ  ವಸ್ತುಗಳನ್ನು ಹಿಂದಿರುಗಿಸಲು ಆಸ್ಟ್ರೇಲಿಯಾ ಒಪ್ಪಿಗೆ - Mahanayaka
4:21 AM Wednesday 11 - December 2024

ಭಾರತದಿಂದ ಕಳ್ಳಸಾಗಣೆಯಾಗಿದ ಪುರಾತನ  ವಸ್ತುಗಳನ್ನು ಹಿಂದಿರುಗಿಸಲು ಆಸ್ಟ್ರೇಲಿಯಾ ಒಪ್ಪಿಗೆ

modi
23/03/2022

ಭಾರತದಿಂದ ಕಳ್ಳಸಾಗಣೆಯಾದ ಪುರಾತನ ವಸ್ತುಗಳನ್ನು ಹಿಂದಿರುಗಿಸಲು ಆಸ್ಟ್ರೇಲಿಯ ಒಪ್ಪಿದೆ. ಭಾರತ-ಆಸ್ಟ್ರೇಲಿಯಾ ಶೃಂಗಸಭೆಯ ಮುನ್ನುಡಿಯಾಗಿ  ಆಸ್ಟ್ರೇಲಿಯಾದಿಂದ 29 ಅಪರೂಪದ ಪ್ರಾಚೀನ ವಸ್ತುಗಳನ್ನು ಭಾರತ  ಮರಳಿ ಪಡೆಯುತ್ತಿದೆ,  ಹಿಂದಿರುಗಿಸಲಾದ ಹೆಚ್ಚಿನ ಕಲಾಕೃತಿಗಳು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವುದಾಗಿದೆ ಮತ್ತು ಜೈನ ಸಂಪ್ರದಾಯಕ್ಕೆ ಸಂಬಂಧಿಸಿದ ಶತಮಾನಗಳಷ್ಟು ಹಳೆಯದಾದ ವರ್ಣಚಿತ್ರಗಳು, ಶಿಲ್ಪಗಳು ಮತ್ತು ದಾಖಲೆಗಳನ್ನು ಒಳಗೊಂಡಿದೆ.

2019 ರಲ್ಲಿ, ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಇವುಗಳನ್ನು ಹಿಂತಿರುಗಿಸುವುದಾಗಿ ಘೋಷಿಸಿದರು.  2014 ರಿಂದ ಇಂತಹ ಸುಮಾರು 200 ಕ್ಕೂ ಅಧಿಕ ಕಲಾಕೃತಿಗಳನ್ನು ಭಾರತಕ್ಕೆ ಹಿಂಪಡೆದಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಾಗಿದೆ.

ಹಿಂದಿರುಗಿಸಿದ ಕಲಾಕೃತಿಗಳಲ್ಲಿ 9 ನೇ ಶತಮಾನದ ಶಿವ ಭೈರವ, 12 ನೇ ಶತಮಾನದ ಸಂಬಂಧರ್, ಜಿನ ಪ್ರತಿಮೆ ಮತ್ತು ಮಹಾರಾಜ ಸಿರ್ ಕಿಶನ್ ಪರ್ಷದ್ ಯಾಮಿನ್ ಲಾಲಾ ದೀನ್ ದಯಾಳ್ ಅವರ ಭಾವಚಿತ್ರ ಸೇರಿವೆ.

ಇದಲ್ಲದೇ ಅಲಂಕಾರ ವಸ್ತುಗಳು,ಆಭರಣಗಳು, ಭಾವಚಿತ್ರಗಳು, ಶಕ್ತಿ, ಶಿವ ಮತ್ತು ಅವನ ಶಿಷ್ಯರು, ಭಗವಾನ್ ವಿಷ್ಣುವಿನ ಅವತಾರಗಳು ಮತ್ತು ಜೈನ ಸಂಸ್ಕೃತಿ ಕುರುಹುಗಳು ಒಳಗೊಂಡಿದೆ. ಹಿಂದಿರುಗಿಸಿದ  ಪುರಾತತ್ವ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಖುದ್ದು ಭೇಟಿ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪಾವಗಡ ಅಪಘಾತ ಪ್ರಕರಣ: ಸೂಕ್ತ ಚಿಕಿತ್ಸೆ ಸಿಗದೇ ಪರದಾಡುತ್ತಿರುವ ಸಂತ್ರಸ್ತರು!

ಕಸ ಸಾಗಾಟದ ವಾಹನ ಚಾಲಕನ ಮೇಲೆ ಗೋರಕ್ಷಕರಿಂದ ಮಾರಣಾಂತಿಕ ಹಲ್ಲೆ

ಮುಗಿಯಿತೇ ಮಾಧ್ಯಮ ಬಹಿಷ್ಕಾರ ಅಭಿಯಾನ?

ಟಿಎಂಸಿ ಮುಖಂಡನ ಕೊಲೆಗೆ ಪ್ರತಿಕಾರ: ಮನೆಗೆ ಬೆಂಕಿ ಹಚ್ಚಿ 10 ಜನರನ್ನು ಕೊಂದ ಪಾಪಿಗಳು

ಇತ್ತೀಚಿನ ಸುದ್ದಿ