ಪುರುಷನ ದೃಷ್ಟಿ ಮಹಿಳೆಗೆ ತಗಲಿದರೆ ಆಕೆ ಚರ್ಮದ ಕ್ಯಾನ್ಸರ್ ಗೆ ತುತ್ತಾಗಬಹುದು | ಜಾಕಿರ್ ನೈಕ್
18/03/2021
ನವದೆಹಲಿ: ಪುರುಷರ ಕಣ್ಣಿನ ದೃಷ್ಟಿ ಮುಸ್ಲಿಮ್ ಮಹಿಳೆಯರ ಮೇಲೆ ಬಿದ್ದರೆ, ಅವರಿಗೆ ಚರ್ಮದ ಕ್ಯಾನ್ಸರ್ ತಗಲಬಹುದು ಎಂದು ಮುಸ್ಲಿಮ್ ಧಾರ್ಮಿಕ ವಿದ್ವಾಂಸ ಜಾಕಿರ್ ನೈಕ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಕಾರಣಕ್ಕಾಗಿ ಬುರ್ಖಾ ಧರಿಸುವಂತೆ ಅವರು ಪ್ರತಿಪಾದಿಸಿದ್ದಾರೆ.
ಪುರುಷರ ಕಣ್ಣಿನಿಂದ ಹೊರ ಹೊಮ್ಮುವ ವಿಕಿರಣ ಮಹಿಳೆಯರ ದೇಹಕ್ಕೆ ತಾಕಿದರೆ, ಚರ್ಮದ ಕ್ಯಾನ್ಸರ್ ಮತ್ತು ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಿಂದ ತಪ್ಪಿಸಿಕೊಳ್ಳಲು ಮಹಿಳೆಯರು ಬುರ್ಖಾ ಧರಿಸಬೇಕು ಎಂದು ಅವರು ಹೇಳಿದ್ದಾರೆ.
ಈ ನಿಯಮ ಮಹಿಳೆಯರಿಗೆ ಮಾತ್ರವೇ ಅನ್ವಯಿಸುತ್ತದೆ. ಪುರುಷರಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಮಹಿಳೆಯರು ಮಾತ್ರ ಕಡ್ಡಾಯವಾಗಿ ಬುರ್ಖಾ ಧರಿಸಿ ಎಂದು ಜಾಕೀರ್ ನೈಕ್ ಹೇಳಿರುವುದಾಗಿ ವರದಿಯಾಗಿದೆ.