ಪುರುಷರು ಹೆಚ್ಚಾಗಿ ಗೂಗಲ್ ನಲ್ಲಿ ಏನನ್ನು ಹುಡುಕುತ್ತಾರೆ ಗೊತ್ತಾ? | ಹೊಸ ಸಮೀಕ್ಷೆ
ಬೃಹತ್ ಸರ್ಚ್ ಇಂಜಿನ್ ಗೂಗಲ್ ನಲ್ಲಿ ಪುರುಷರು ಹೆಚ್ಚಾಗಿ ಏನನ್ನು ಸರ್ಚ್ ಮಾಡುತ್ತಾರೆ ಎಂಬ ಬಗ್ಗೆ Frommars.com ವೆಬ್ ಸೈಟ್ ಪತ್ತೆ ಮಾಡಿದೆ. ಪುರುಷರ ಮನಸ್ಸನ್ನು ಅರಿಯುವ ನಿಟ್ಟಿನಲ್ಲಿ ಈ ವೆಬ್ ಸೈಟ್ ಸಮೀಕ್ಷೆಯನ್ನು ಮಾಡಿದೆ.
ಫಿಟ್ ನೆಸ್: ಬಹುತೇಕ ಪುರುಷರು ಫಿಟ್ ನೆಸ್ ಬಗ್ಗೆ ಹೆಚ್ಚಾಗಿ ಹುಡುಕಾಟ ನಡೆಸುತ್ತಿದ್ದಾರಂತೆ. ವ್ಯಾಯಾಮದ ಬಳಿಕ ಪ್ರೋಟೀನ್ ತೆಗೆದುಕೊಳ್ಳಬೇಕೋ, ಬೇಡವೋ? ಎಂಬ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಿದ್ದಾರಂತೆ. ಈ ಪೈಕಿ ಯಾವ ಪ್ರೋಟೀನ್ ಬೆಸ್ಟ್ ಎಂಬುದನ್ನೂ ತಿಳಿಯಲು ಪ್ರಯತ್ನಿಸುತ್ತಿದ್ದಾರಂತೆ.
ಕೂದಲು ಉದುರುತ್ತಾ?: ಜುಟ್ಟು ಕಟ್ಟಿದ್ರೆ ಅಥವಾ ಟೋಪಿ ಹಾಕಿದ್ರೆ ಕೂದಲು ಉದುರುತ್ತಾ ಎಂಬ ಪ್ರಶ್ನೆಗೂ ಉತ್ತರ ಹುಡುಕುವ ಪ್ರಯತ್ನ ನಡೆಸುತ್ತಾರೆ. ಪ್ರತಿ ವರ್ಷ ಸರಾಸರಿ 52,100 ಜನರು ಗೂಗಲ್‌ನಲ್ಲಿ ಈ ವಿಷ್ಯದ ಬಗ್ಗೆ ಹುಡುಕಾಟ ನಡೆಸುತ್ತಾರಂತೆ.
ಸ್ತನ ಕ್ಯಾನ್ಸರ್: ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುವುದು ಮಹಿಳೆಯರಲ್ಲಿ. ಆದರೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯಿರುವ ಪುರುಷರು, ತಮಗೆ ಸ್ತನ ಕ್ಯಾನ್ಸರ್ ಬರಬಹುದೆ ಎಂಬುದನ್ನು ತಿಳಿಯಲು ಬಯಸುತ್ತಾರೆ. ಈ ಕುರಿತು 61,200 ಜನರು ಗೂಗಲ್‌ನಲ್ಲಿ ಹುಡುಕಿದ್ದಾರೆ. ಪುರುಷರಲ್ಲಿ ಇತರ ಕ್ಯಾನ್ಸರ್ ಗಳಿಗಿಂತ ಸ್ತನ ಕ್ಯಾನ್ಸರ್ ತುಂಬಾ ಭಿನ್ನವಾಗಿರುತ್ತದೆ. 60 ವರ್ಷದ ನಂತರ ಪುರುಷರು ಈ ಸಮಸ್ಯೆಯಿಂದ ಬಳಲುತ್ತಾರೆ.
ಶೇವಿಂಗ್: ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿಯಿರುವ ಪುರುಷರು ಶೇವಿಂಗ್ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುತ್ತಾರೆ. ಶೇವಿಂಗ್ ನಂತ್ರ ಹೆಚ್ಚಿನ ಕೂದಲು ಬೆಳೆಯುವ ಸಾಧ್ಯತೆಯಿದೆಯಾ ಎಂಬುದನ್ನು ಸರ್ಚ್ ಮಾಡ್ತಾರೆ. ಪ್ರತಿವರ್ಷ 68,400 ಜನರು ಈ ಬಗ್ಗೆ ಹುಡುಕಾಟ ನಡೆಸಿದ್ದಾರೆ.
ನಪುಂಸಕತೆ: ಪುರುಷರು ತಮ್ಮ ಲೈಂಗಿಕತೆಯ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಪ್ರತಿವರ್ಷ 68,600 ಜನರು ನಪುಂಸಕತೆಯ ಲಕ್ಷಣ ಹೊಂದಿದ್ದಾರಾ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸುತ್ತಾರೆ.