ಪುಷ್ಪ –2 ಚಿತ್ರೀಕರಣ ಆರಂಭ: ಗುದ್ದಾಡಲು ಸಿದ್ಧರಾದ ಅಲ್ಲು ಅರ್ಜುನ್– ಫಹದ್ ಫಾಸಿಲ್
ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಚಿತ್ರ ಪುಷ್ಪ– 2 ಚಿತ್ರದ ಚಿತ್ರೀಕರಣ ಆರಂಭಗೊಂಡಿದ್ದು, ಈ ಸಂಬಂಧ ಸಿನಿಮಾಟೋಗ್ರಾಫರ್ ಕೂಬಾ ಬ್ರೊಜೆಕ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರ ಹಂಚಿಕೊಂಡಿದ್ದಾರೆ.
ಬಿಳಿ ಶರ್ಟ್, ಗಡ್ಡ ಬಿಟ್ಟಿರುವ ಅಲ್ಲು ಅರ್ಜುನ್ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಹಂಚಿಕೊಂಡು ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದೆ.
ಪುಷ್ಪ –1 ಸೂಪರ್ ಹಿಟ್ ಆಗಿತ್ತು. ಒಂದು ಇಂಟ್ರಸ್ಟಿಂಗ್ ಘಟ್ಟದಲ್ಲಿ ಮೊದಲ ಭಾಗ ಅಂತ್ಯಗೊಂಡಿತ್ತು. ಇದೀಗ ಎರಡನೇ ಭಾಗದಲ್ಲಿ ಮಲೆಯಾಳಂ ನಟ ಫಹದ್ ಫಾಝಿಲ್ ಹಾಗೂ ಅಲ್ಲು ಅರ್ಜುನ್ ಗುದ್ದಾಡಲು ಸಿದ್ಧರಾಗಿದ್ದಾರೆ.
ಕುತಂತ್ರಿ ಪೊಲೀಸ್ ಪಾತ್ರವನ್ನು ಫಹದ್ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಮರಗಳ್ಳ ಕ್ರಿಮಿನಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka