ಉತ್ತರ ಪತ್ರಿಕೆಯಲ್ಲಿ “ಪುಷ್ಪಾ… ಪುಸ್ಪರಾಜ್” ಎಂದು ಬರೆದಿಟ್ಟ ವಿದ್ಯಾರ್ಥಿನಿ: ಶಿಕ್ಷಕರು ಕಂಗಾಲು
ಕೋಲ್ಕತ್ತಾ: ಪರೀಕ್ಷೆಗೆ ಓದದೇ ಸಿನಿಮಾ ನೋಡುತ್ತಿದ್ದರೆ, ಸಾಮಾನ್ಯವಾಗಿ ಪೋಷಕರು “ನೀನು ಸಿನಿಮಾದ ಕಥೆಯನ್ನು ಪರೀಕ್ಷೆಯಲ್ಲಿ ಬರೆದು ಬರುತ್ತೀಯಾ? ಎಂದು ಮಕ್ಕಳನ್ನು ಗದರುವುದುಂಟು. ಆದರೆ, ಇಲ್ಲೊಬ್ಬಳು ವಿದ್ಯಾರ್ಥಿನಿ, ಸಿನಿಮಾದ ಡೈಲಾಗ್ ನ್ನೇ ಪ್ರಶ್ನೆ ಪತ್ರಿಕೆಯಲ್ಲಿ ಬರೆಯುವ ಮೂಲಕ ಶಿಕ್ಷಕರನ್ನು ದಂಗಾಗಿಸಿದ್ದಾಳೆ.
ಹೌದು..! ಇದು ಕೋಲ್ಕತ್ತಾದಲ್ಲಿ ನಡೆದ ಘಟನೆಯಾಗಿದ್ದು, ಹೈಯರ್ ಸೆಕೆಂಡರಿ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಅಲ್ಲು ಅರ್ಜುನ್(Allu Arjun) ನಟನೆಯ ‘ಪುಷ್ಪಾ’ (Pushpa ) ಚಿತ್ರದ ಡೈಲಾಗ್ ನ್ನು ಬರೆದಿಟ್ಟಿದ್ದಾಳೆ.
“ಪುಷ್ಪಾ… ಪುಷ್ಪರಾಜ್ ನಾನೇನು ಬರೆದಿಲ್ಲ”(Pushpa Pushparaj) ಎಂದಷ್ಟೇ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿ ಬರೆದಿದ್ದಾಳೆ. ಪ್ರಶ್ನೆ ಪತ್ರಿಕೆಯ ಮೌಲ್ಯಮಾಪನದ ವೇಳೆ ಈ ವಿಚಿತ್ರ ಉತ್ತರ ಪತ್ರಿಕೆಯನ್ನು ನೋಡಿ ಶಿಕ್ಷಕರು ದಂಗಾಗಿದ್ದಾರೆ.
ಆನ್ ಲೈನ್ ತರಗತಿ ಬಂದ ಬಳಿಕ ಮಕ್ಕಳು ಶಿಕ್ಷಣದ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುವ ದೂರುಗಳು ಕೂಡ ಶಿಕ್ಷಕರಿಂದ ಬಂದಿದೆ. ಆನ್ ಲೈನ್ ಕ್ಲಾಸ್ ನೆಪದಲ್ಲಿ ಮಕ್ಕಳ ಕೈಗೆ ಮೊಬೈಲ್ ಬಂದಾಯ್ತು, ಮಕ್ಕಳು ಇಂಟರ್ ನೆಟ್ ನಲ್ಲಿಯೇ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ, ಹೇಳಿದ್ದು ಕೇಳುತ್ತಿಲ್ಲ ಎನ್ನುವ ದೂರುಗಳ ಸರಮಾಲೆಗಳೇ ಪೋಷಕರಿಂದ ಕೇಳಿ ಬರುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮೀನು ಹಿಡಿಯಲು ತೆರಳಿದ್ದ ಯುವಕ ಬಲೆಯಲ್ಲಿ ಸಿಲುಕಿ ಸಾವು
ಎರಡು ತಲೆ ಹಾವು ಮಾರಾಟ ಯತ್ನ ಆರೋಪಿಗಳ ಬಂಧನ
ನಟ ಮೋಹನ್ ಲಾಲ್ ವಿರುದ್ಧ ದಂತ ಪ್ರಕರಣ: ಸರ್ಕಾರದ ನಿರ್ಧಾರದ ವಿರುದ್ಧದ ಅರ್ಜಿಗಳನ್ನು ತಿರಸ್ಕರಿಸಿದ ಕೋರ್ಟ್