ಪುಷ್ಪ ಸಿನಿಮಾ ಸ್ಟೈಲ್ ನಲ್ಲಿ ರಕ್ತ ಚಂದನ ಸಾಗಾಟ: ಎಮ್ಮೆಯಿಂದಾಗಿ ಸಿಕ್ಕಿಬಿದ್ದ ಕಳ್ಳರು!
ಹೊಸಕೋಟೆ: ಟೊಮೆಟೋ ಬಾಕ್ಸ್ ಕೆಳಗೆ ರಕ್ತಚಂದನಗಳನ್ನಿಟ್ಟು ಟಾಟಾ ಏಸ್ ವಾಹನದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗಳ ಖಚಿತ ಮಾಹಿತಿ ಮೇರೆಗೆ ಪೊಲೀಸರು ವರ್ತೂರು ಮತ್ತು ಹೊಸಕೋಟೆ ಮಾರ್ಗಮಧ್ಯದಲ್ಲಿ ಹಿಂಬಾಲಿಸಿಕೊಂಡು ಹಿಡಿದಿದ್ದಾರೆ.
ಪೊಲೀಸರು ಹಿಂಬಾಲಿಸುವುದನ್ನು ಗಮನಿಸಿದ ಚಾಲಕ ವಾಹನವನ್ನು ಎಮ್ಮೆಗೆ ಡಿಕ್ಕಿ ಹೊಡೆದ ನಂತರ ವಾಹನ ಪರಿಶೀಲಿಸಿದ ಪೊಲೀಸರು ರಕ್ತಚಂದನ ದಂಧೆ ಬಹಿರಂಗಗೊಂಡಿದೆ. ಕೊನೆಗೆ ಹೊಸಕೋಟೆಯ ಕಟ್ಟಿಗೇನಹಳ್ಳಿ ಬಳಿ ವಾಹನ ಮತ್ತು ರಕ್ತ ಚಂದನವನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಅರಣ್ಯ ಇಲಾಖೆ ವಿಜಿಲೆನ್ಸ್ ಡಿಸಿಎಫ್ ಗಂಗಾಧರ್ ನೇತೃತ್ವದ ತಂಡ ದಾಳಿ ಮಾಡಿ ಸುಮಾರು 28 ಲಕ್ಷ ಮೌಲ್ಯದ 600 ಕೆ.ಜಿ.ಯ 28 ರಕ್ತ ಚಂದನ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣ ಭೇದಿಸಲು ಪೊಲೀಸರು ಸ್ನೀಪರ್ ಡಾಗ್ ಅನ್ನು ಬಳಕೆ ಮಾಡಿದ್ದು, ಅಕ್ರಮ ರಕ್ತಚಂದನ ಸಾಗಣಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ತನ್ನನ್ನು ತಾನೇ ಮದುವೆಯಾಗಲು ಮುಂದಾದ ಯುವತಿ: ಜೂನ್ 11ರಂದು ಮದುವೆ!
ಕುಟುಂಬ ಸಮೇತ ಆತ್ಮಹತ್ಯೆ ಯತ್ನ: ಏಳು ವರ್ಷದ ಬಾಲಕಿ ಸಾವು
ಮದ್ಯದ ಮತ್ತಿನಲ್ಲಿ ಟ್ರಕ್ ಚಾಲನೆ: ಸರಣಿ ಅಪಘಾತ ನಡೆಸಿ ಚಾಲಕ ಪರಾರಿ!
ಕೋಮುವಾದದ ಪ್ರಯೋಗಶಾಲೆಯಾಗಿ ಕರ್ನಾಟಕ: ಮುಸ್ಲಿಂ ಸಮಾವೇಶದಲ್ಲಿ ಕೇಳಿ ಬಂದ ಅಭಿಪ್ರಾಯಗಳೇನು?