ಸ್ನೇಹಿತನ ಮೊದಲ ರಾತ್ರಿಗೆ ಅಶ್ಲೀಲ ಬ್ಯಾನರ್ ಹಾಕಿದ್ರು…! | ವ್ಯಾಪಕ ಟೀಕೆ - Mahanayaka
5:58 AM Tuesday 17 - December 2024

ಸ್ನೇಹಿತನ ಮೊದಲ ರಾತ್ರಿಗೆ ಅಶ್ಲೀಲ ಬ್ಯಾನರ್ ಹಾಕಿದ್ರು…! | ವ್ಯಾಪಕ ಟೀಕೆ

sudarshan
14/06/2023

ಈಗಂತೂ ಸಾಧನೆ, ಸೇವೆ ಮಾಡಿದವರನ್ನು ಗುರುತಿಸಿ ಬ್ಯಾನರ್, ಫ್ಲೆಕ್ಸ್ ಹಾಕುವುದಕ್ಕೆ ಜನ ಮುಂದೆ ಬರಲ್ಲ. ಆದ್ರೆ ಬಿಟ್ಟಿ ಪ್ರಚಾರ, ಶುಭಾಶಯ, ಸಂತಾಪ ಹೀಗೆ ತಮ್ಮ ತೆವಲಿಗೋಸ್ಕರ ಬ್ಯಾನರ್, ಫ್ಲೆಕ್ಸ್ ಹಾಕುವವರೇ ಹೆಚ್ಚು. ಆದ್ರೆ ಇದಂತೂ ಅತಿರೇಕ.

ಹೌದು… ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಪೊಲೀಸ್‌ ಠಾಣೆಯ ಕಾಂಪೌಂಡ್ ಗೋಡೆಗೆ ತಾಗಿಕೊಂಡಂತೆ ಯುವಕನೊಬ್ಬನ “ಮದುವೆಯ ರಾತ್ರಿಯ ಸಂಭ್ರಮ” ಎಂಬ ಹೋರ್ಡಿಂಗ್ಸ್ ಹಾಕಲಾಗಿದ್ದು ವ್ಯಂಗ್ಯಕ್ಕೆ ಗುರಿಯಾಗಿದೆ.

ಯುವಕನೊಬ್ಬನ ಮದುವೆಯ ಮೊದಲ ರಾತ್ರಿಯ ಸಂಭ್ರಮ ಎಂದು ಹೋರ್ಡಿಂಗ್ಸ್ ಹಾಕಲಾಗಿದೆ. ರಾತ್ರಿಯಿಡೀ ಹೋರಾಡಿ ಗೆದ್ದು ಬಾ ಎಂದು ಗೆಳೆಯರು ಹಾರೈಸಿ ಸರಕಾರಿ ಜಾಗದಲ್ಲಿ ದೊಡ್ಡ ಸಾಧನೆ ಎಂಬಂತೆ ಹೋರ್ಡಿಂಗ್ ಹಾಕಿದ್ದಾರೆ.

ಸರಕಾರಿ ಜಾಗದಲ್ಲಿ ಯಾವುದೇ ಅನುಮತಿ ಇಲ್ಲದೆ ತಮಗೆ ಇಷ್ಟಬಂದಂತೆ ಅಶ್ಲೀಲ ಸಂದೇಶ ಸಾರುವ, ಮುಜುಗರ ತರುವ ಜಾಹೀರಾತು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಜೊತೆಗೆ ಮಳೆಗೆ ಚಳಿಗೆ ಕಚೇರಿಯಲ್ಲಿ ಕುಳಿತಿರುವ ಅಧಿಕಾರಿಗಳು ಮೈಚಳಿ ಬಿಟ್ಟು ಇಂತಹ ಅನಧಿಕೃತ, ಮತ್ತು ಅಶ್ಲೀಲ ಬ್ಯಾನರ್‌ ಗಳ ವಿರುದ್ದ ದಂಡ ಅಥವಾ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ