ತಂದೆ ಹಾವನ್ನು ಹೊಡೆದು ಕೊಂದ ಕೆಲವೇ ಗಂಟೆಗಳಲ್ಲಿ ಪುತ್ರನನ್ನು ಕಚ್ಚಿ ಕೊಂದ ಇನ್ನೊಂದು ಹಾವು - Mahanayaka

ತಂದೆ ಹಾವನ್ನು ಹೊಡೆದು ಕೊಂದ ಕೆಲವೇ ಗಂಟೆಗಳಲ್ಲಿ ಪುತ್ರನನ್ನು ಕಚ್ಚಿ ಕೊಂದ ಇನ್ನೊಂದು ಹಾವು

snek
15/04/2022

ಮಧ್ಯಪ್ರದೇಶ: ತಂದೆ ಹಾವನ್ನು  ಹೊಡೆದು ಸಾಯಿಸಿದ  ಕೆಲವೇ ಗಂಟೆಗಳಲ್ಲಿ ಮತ್ತೊಂದು ಹಾವು ಬಂದು  ಮಗನನ್ನು ಕಚ್ಚಿದ ವಿಚಿತ್ರ ಘಟನೆ  ಮಧ್ಯಪ್ರದೇಶದ ಸೆಹೋರ್ ನಲ್ಲಿ ನಡೆದಿದೆ.

ಮಧ್ಯಪ್ರದೇಶದ ಬುಧ್ನಿ ಜೋಶಿಪುರ ನಿವಾಸಿ ಕಿಶೋರ್ ಲಾಲ್ ಅವರ ಪುತ್ರ ರೋಹಿತ್ (12) ಹಾವು ಕಚ್ಚಿ ಸಾವನ್ನಪ್ಪಿದ ಬಾಲಕನಾಗಿದ್ದು,  ರಾತ್ರಿ ವೇಳೆ ಈ ದುರ್ಘಟನೆ ನಡೆದಿದ್ದು, ಘಟನೆಗೆ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೂಲಿ ಕಾರ್ಮಿಕನಾದ ಕಿಶೋರ್ ಎಂಬವರು  ತನ್ನ ಮನೆಯ ಆಸುಪಾಸಿನಲ್ಲಿ ಹೋಗುತ್ತಿದ್ದ  ಹಾವನ್ನು ಕೊಂದು ಬಳಿಕ ಮಣ್ಣಿನಲ್ಲಿ ಹೂತು ಹಾಕಿದ್ದರು.  ಅಂದು ರಾತ್ರಿ 2 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಮಗನ ಕಾಲಿಗೆ ಮತ್ತೊಂದು ಹಾವು ಕಚ್ಚಿತ್ತು.

ತಕ್ಷಣವೇ ಮಗನನ್ನು ಹೊಶಂಗಾಬಾದ್‌ ನ ಜಿಲ್ಲಾಸ್ಪತ್ರೆಗೆ ಕರೆದೊಯ್ದರೂ ಅಲ್ಲಿ ಸರಿಯಾದ ಚಿಕಿತ್ಸಾ ಸೌಲಭ್ಯಗಳಿಲ್ಲದ ಕಾರಣ ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ತಕ್ಷ ವೇ ನಗರದ ಮತ್ತೊಂದು ಆಸ್ಪತ್ರೆಗೆ ತೆರಳುವಂತೆ ತಿಳಿಸಲಾಯಿತು. ಅಷ್ಟೊತ್ತಿಗಾಗಲೇ  ಬಾಲಕ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.

ಈ ಪ್ರದೇಶದಲ್ಲಿ ಹಾವುಗಳ ಹಾವಳಿ ಹೆಚ್ಚಿರುವುದರಿಂದಾಗಿ ಇಂತಹದ್ದೊಂದು ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಗ್ರಾಮಸ್ಥರು, ಇದು ಸರ್ಪ ದೋಷದಿಂದಾಗಿ ನಡೆದಿರುವ ಘಟನೆಯಾಗಿದೆ ಎಂದು ಹೇಳುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಂಗಳೂರು: ABVP ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮ್ಮಳನ

ಸಂತೋಷ್ ಪಾಟೀಲ್ ಆತ್ಮಹತ್ಯೆಯ ಬಳಿಕ 29 ಪಿಡಿಒಗಳನ್ನು ವರ್ಗಾವಣೆ ಮಾಡಿದ್ದ ಈಶ್ವರಪ್ಪ!

ನನ್ನ ಜೀವಿತಾವಧಿಯಲ್ಲಿ ದಲಿತ ಸಿಎಂ ಮಾಡುವ ಪಣತೊಟ್ಟಿದ್ದೇನೆ: ಕುಮಾರಸ್ವಾಮಿ

ನಿಮಗಿನ್ನೂ ಅವಕಾಶವಿದೆ: ಹಿಜಾಬ್ ಪರ ವಿದ್ಯಾರ್ಥಿನಿ ಸಿಎಂಗೆ ಹೇಳಿದ್ದೇನು?

ಈಶ್ವರಪ್ಪ ಶೀಘ್ರವೇ ಆರೋಪಗಳಿಂದ ಮುಕ್ತರಾಗುತ್ತಾರೆ: ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ

ಇತ್ತೀಚಿನ ಸುದ್ದಿ