ಅಣುಬಾಂಬ್ ಪ್ರಯೋಗಕ್ಕೆ ಸಿದ್ಧವಾಗ್ತಿದೆಯಾ ರಷ್ಯಾ? | ತನ್ನ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಪುಟಿನ್
ಉಕ್ರೇನ್ ವಿರುದ್ಧ ರಷ್ಯಾ ಅಣುಬಾಂಬ್ ಪ್ರಯೋಗಿಸಲು ಕೂಡ ಸಜ್ಜಾಗಿದ್ದು, ಇದಕ್ಕಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಣುಬಾಂಬ್ ನಿರೋಧಕ ವಲಯಕ್ಕೆ ತನ್ನ ಕುಟುಂಬಸ್ಥರನ್ನು ರವಾನಿಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ರಷ್ಯಾದ ಪ್ರಾಧ್ಯಾಪಕರೊಬ್ಬರು ಈ ಹೇಳಿಕೆ ನೀಡಿದ್ದು, ಸರ್ಬಿಯಾದ ಅಲ್ಟಾಯಿ ಬೆಟ್ಟಗಳ ಶ್ರೇಣಿಯ ಬುಡದಲ್ಲಿ ಪರಮಾಣು ಬಾಂಬ್ ನಿರೋಧಕ ಐಶಾರಾಮಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ತನ್ನ ಕುಟುಂಬವನ್ನು ಈಗಾಗಲೇ ಪುಟಿನ್ ಈ ರಹಸ್ಯ ಸ್ಥಳಕ್ಕೆ ರವಾನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಣುಬಾಂಬ್ ನಿಂದ ಉಂಟಾಗಬಹುದಾದ ವಿದ್ವಂಸಕಾರಿ ಸನ್ನಿವೇಶದಿಂದ ತನ್ನ ಕುಟುಂಬಕ್ಕೆ ಮಾತ್ರವೇ ವ್ಲಾದಿಮಿರ್ ಪುಟಿನ್ ರಕ್ಷಣೆ ನೀಡಲು ಮುಂದಾಗಿದ್ದಾರೆ ಎನ್ನುವ ಆರೋಪ ರಷ್ಯಾದಲ್ಲಿ ಆತಂಕಕ್ಕೆ ಕಾರಣವಾಗಿದೆ. ಉಕ್ರೇನ್ ಮೇಲೆ ಪುಟಿನ್ ನಡೆಸುತ್ತಿರುವ ದಾಳಿಯನ್ನು ರಷ್ಯಾದವರೇ ವಿರೋಧಿಸಲು ಆರಂಭಿಸಿದ್ದು, ಪುಟಿನ್ ಯುದ್ಧದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಗುಂಡಿನ ಚಕಮಕಿ: ಓರ್ವ ನಕ್ಸಲ್ ಹತ್ಯೆ
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ: ಸುರಕ್ಷಿತವಾಗಿ ಕೀವ್ ತೊರೆದ ಭಾರತೀಯರು; ಕಾರ್ಯಾಚರಣೆಗೆ 26 ವಿಮಾನ ಬಳಕೆ
ನ್ಯಾಯಾಧೀಶರಿಗೆ ಚಾಕುವಿನಿಂದ ಇರಿತ: ಕಚೇರಿ ಸಹಾಯಕ ಸಿಬ್ಬಂದಿಯ ಬಂಧನ