ತಂದೆ ಜೈಲು ಪಾಲು, ತಾಯಿ ಬಿಟ್ಟು ಹೋಗಿದ್ದಾರೆ, ಪುಟ್ಟ ಬಾಲಕ ಬೀದಿಪಾಲು - Mahanayaka
8:14 PM Wednesday 11 - December 2024

ತಂದೆ ಜೈಲು ಪಾಲು, ತಾಯಿ ಬಿಟ್ಟು ಹೋಗಿದ್ದಾರೆ, ಪುಟ್ಟ ಬಾಲಕ ಬೀದಿಪಾಲು

16/12/2020

ಮುಜಾಫುರ್ ನಗರ: ಫುಟ್ ಪಾತ್ ನಲ್ಲಿ ಪುಟ್ಟ ಹುಡುಗನೊಬ್ಬ ನಾಯಿಯ ಜೊತೆಗೆ ಮಲಗಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣಗಳದಲ್ಲಿ ವೈರಲ್ ಆಗಿದ್ದು, ಇದೀಗ ಬಾಲಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಉತ್ತರ ಪ್ರದೇಶದ ಮುಜಾಫರ್​ ನಗರದಲ್ಲಿ ಪತ್ತೆಯಾಗಿರುವ ಈ ಹುಡುಗನಿಗೆ ತನ್ನ ತಂದೆ ಜೈಲು ಪಾಲಾಗಿದ್ದಾರೆ. ತಾಯಿ ತನ್ನನ್ನು ಬಿಟ್ಟು ಹೋಗಿದ್ದಾರೆ ಎನ್ನುವ ಎರಡು ವಿಷಯ ಮಾತ್ರವೇ ತಿಳಿದಿದೆ ಎಂದು ಹೇಳಲಾಗಿದೆ.

ಈ ಹುಡುಗನ ಹೆಸರು ಅಂಕಿತ್ ಎಂದು ತಿಳಿದು ಬಂದಿದೆ. ಜೀವನೋಪಾಯಕ್ಕಾಗಿ ಚಹಾ ಮತ್ತು ಬಲೂನ್ ಮಾರಾಟ ಮಾಡುತ್ತಿದ್ದ ಈ ಹುಡುಗ,  ರಾತ್ರಿ ವೇಳೆ ತನ್ನ ಪ್ರೀತಿಯ ನಾಯಿ ಡ್ಯಾನಿ ಜೊತೆಗೆ ಫುಟ್ ಪಾತ್ ನಲ್ಲಿ  ಕಂಬಳಿ ಹೊದ್ದು ಮಲಗುತ್ತಾನೆ.

ಅಂಕಿತ್ ತನ್ನ ನಾಯಿಯ ಜೊತೆಗೆ ಮಲಗಿರುವ ಫೋಟೋ ವೈರಲ್ ಆಗುತ್ತಿದ್ದಂತೆಯೇ ಮುಜಾಫುರ್​ ನಗರ ಎಸ್​ಎಸ್​ಪಿ ಅಭಿಷೇಕ್​ ಯಾದವ್ ಬಾಲಕನನ್ನ ಹುಡುಕುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.  ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ಅಂಕಿತ್​​ನನ್ನ ಪತ್ತೆ ಮಾಡಿದ್ದಾರೆ. ಸದ್ಯ ಜಿಲ್ಲಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಗೆ ಈತನ ಬಗ್ಗೆ ಮಾಹಿತಿ ನೀಡಲಾಗಿದ್ದು ಅಂಕಿತ್​ ನ ಕುಟುಂಬಸ್ಥರ  ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.

ಇತ್ತೀಚಿನ ಸುದ್ದಿ