ವ್ಯಾಪಾರವೂ ಇಲ್ಲ, ಆಶ್ರಯವೂ ಇಲ್ಲ | ಪುಟ್ಟ ಮಕ್ಕಳ ಜೊತೆ ದಿಕ್ಕು ಕಾಣದೇ ನಿಂತ ಅಲೆಮಾರಿಗಳು - Mahanayaka
8:07 PM Thursday 12 - December 2024

ವ್ಯಾಪಾರವೂ ಇಲ್ಲ, ಆಶ್ರಯವೂ ಇಲ್ಲ | ಪುಟ್ಟ ಮಕ್ಕಳ ಜೊತೆ ದಿಕ್ಕು ಕಾಣದೇ ನಿಂತ ಅಲೆಮಾರಿಗಳು

alemari
30/05/2021

ಬೆಂಗಳೂರು: ಬಲೂನ್ ವ್ಯಾಪಾರ ಮಾಡುತ್ತಾ ಊರೂರು ಸುತ್ತುವ ಅಲೆಮಾರಿಗಳನ್ನು ಕೊರೊನಾ ಕಾಲದಲ್ಲಿಯೂ ಎಲ್ಲಿಯೂ ನಿಲ್ಲದಂತೆ ಬೆದರಿಸಿ ಓಡಿಸುತ್ತಿರುವ ಘಟನೆ ವರದಿಯಾಗಿದ್ದು, ಇದೀಗ  ಈ ಕುಟುಂಬಗಳು ಅತಂತ್ರವಾಗಿ ಅಲೆದಾಡುತ್ತಿವೆ.

ವಿಜಯನಗರದ ಟೋಲ್ ಗೇಟ್ ಮೆಟ್ರೋ ಕೆಳಗೆ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದ 15 ಕುಟುಂಬಗಳನ್ನು ಪೊಲೀಸರು ನಿನ್ನೆ ರಾತ್ರಿ ಎತ್ತಂಗಡಿ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಈ ವಲಸೆ ಕಾರ್ಮಿಕರು ಇಲ್ಲಿನ  ಕಾರ್ಡ್ ರೋಡ್ ನಲ್ಲಿರುವ ದೋನಿ ಘಾಟ್ ಸಿಗ್ನಲ್ ನ ಫ್ಲೈಓವರ್ ಕೆಳಗೆ ಆಶ್ರಯ ಪಡೆಯಲು ಯತ್ನಿಸಿದ್ದಾರೆ.  ಆದರೆ ಬಿಬಿಎಂಪಿ ಅಧಿಕಾರಿಗಳು ಅಲ್ಲಿಂದಲೂ ಅವರನ್ನು  ಸ್ಥಳ ಖಾಲಿ ಮಾಡಿಸಲು ಮುಂದಾಗಿದ್ದಾರೆ. 15 ದಿನಗಳ ವರೆಗೆ ಯಾರು ಈ ಕಡೆಗೆ ಕಾಣಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಒಂದೆಡೆ ರಾಜ್ಯದಲ್ಲಿ ಮಳೆ ಕೂಡ ಸುರಿಯುತ್ತಿದೆ. ಈ ನಡುವೆ ಈ ಅಲೆಮಾರಿ ಜನರನ್ನು ಸ್ವಲ್ಪವೂ ಕರುಣೆ ಇಲ್ಲದೇ ಸುತ್ತಾಡಿಸುತ್ತಿರುವುದು ಜನರು ಕೆಂಗಣ್ಣಿಗೆ ಗುರಿಯಾಗಿದೆ. ಕೊರೊನಾದಿಂದಾಗಿ ಆದಾಯವಿಲ್ಲದೇ ಹಸಿವಿನಿಂದ ಒದ್ದಾಡುತ್ತಿರುವ ಅಮಾಯಕರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ