ಪುಟ್ಟ ತಂಗಿಯನ್ನು ಮಡಿಲಲ್ಲಿಟ್ಟುಕೊಂಡು ಶಾಲೆಗೆ ಹಾಜರಾಗುತ್ತಿರುವ ಅಕ್ಕ!
ಪುಟ್ಟ ನಾಲ್ಕನೇ ತರಗತಿಯ ಬಾಲಕಿಯೊಬ್ಬಳು ತನ್ನ ಪುಟ್ಟ ತಂಗಿಯನ್ನು ಮಡಿಲಲ್ಲಿಟ್ಟುಕೊಂಡು ತರಗತಿಗೆ ಹಾಜರಾಗುತ್ತಿರುವ ಹೃದಯಸ್ಪರ್ಶಿ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಮಣಿಪುರದ ಮೈನಿಂಗ್ ನ ನಾಲ್ಕನೇ ತರಗತಿಯ ಹುಡುಗಿ ಲಿಯು ಪಮೇಯ್ ತನ್ನ ತಂಗಿಯನ್ನು ತನ್ನ ಜೊತೆ ಶಾಲೆಗೆ ಕರೆದುಕೊಂಡು ಹೊಗುತ್ತಿದ್ದಳು. ಲಿಯು ಪಮೇಯ್ ಹೆತ್ತವರು ವ್ಯವಸಾಯದಲ್ಲಿ ತೊಡಗಿದ್ದರು. ಆದ್ದರಿಂದ ಆವರ ಪುಟ್ಟ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹಾಗಾಗಿ ಶಾಲೆಗೆ ಹೋಗುವ ಸಂದರ್ಭದಲ್ಲಿ ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಳು.
ಲಿಯು ಪಮೇಯ್ ತನ್ನ ತಂಗಿಯನ್ನು ಮಡಿಲಲ್ಲಿಟ್ಟುಕೊಂಡು ತರಗತಿಗೆ ಹಾಜರಾಗುತ್ತಿರುವ ಚಿತ್ರ ವೈರಲ್ ಆಗುತ್ತಿದ್ದಂತೆ ಮಣಿಪುರದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ಮಾಬಿಶ್ವಜಿತ್ ಸಿಂಗ್ ಅವರು ಬಾಲಕಿಗೆ ಬೆಂಬಲ ನೀಡುವುದಾಗಿ ಟ್ವೀಟ್ ಮಾಡಿದ್ದು, “ಶಿಕ್ಷಣಕ್ಕಾಗಿ ಆಕೆಯ ಛಲ ಕಂಡು ಆಶ್ಚರ್ಯಚಕಿತರಾದರು”
ಸಚಿವ ಮಾಬಿಶ್ವಜಿತ್ ಸಿಂಗ್ ಬಾಲಕಿಯ ಸಂಬಂಧಿಕರನ್ನು ಸಂಪರ್ಕಿಸಿದ್ದು ಆಕೆಯನ್ನು ಇಂಫಾಲ್ಗೆ ಸಭೆಗೆ ಕರೆತರುವಂತೆ ಹೇಳಿದರು. ‘ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿ ಗಮನ ಸೆಳೆದ ತಕ್ಷಣ ನಾವು ಆಕೆಯ ಕುಟುಂಬವನ್ನು ಕಂಡು ಆಕೆಯನ್ನು ಇಂಫಾಲ್ಗೆ ಕರೆತರುವಂತೆ ಹೇಳಿದೆವು. ಪದವಿ ಶಿಕ್ಷಣ ಮುಗಿಯುವವರೆಗೂ ಆಕೆಯ ವಿದ್ಯಾಭ್ಯಾಸವನ್ನು ನಾನೇ ಖುದ್ದಾಗಿ ನೋಡಿಕೊಳ್ಳುತ್ತೇನೆ ಎಂದು ಆಕೆಯ ಮನೆಯವರಿಗೆ ತಿಳಿಸಿದ್ದೆ. ಆಕೆಯ ಸಮರ್ಪಣಾಭಾವನೆಗೆ ಹೆಮ್ಮೆ!’ ಎಂದು ಸಚಿವರು ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾರತ್ನ, ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆ
ರಾಜ್ಯದಲ್ಲಿ ಬಜರಂಗದಳದವರು ಸಿಎಂ ಆಗಿದ್ದಾರೆ ಅಂತ ಅನ್ನಿಸ್ತಿದೆ: ಪ್ರಿಯಾಂಕ್ ಖರ್ಗೆ ಕಿಡಿ ನುಡಿ
ಸಣ್ಣ ವಯಸ್ಸಲ್ಲೇ ಪ್ರೀತಿಸಿದರು, ಮದುವೆಯೂ ಆಯ್ತು, ಆದರೆ ಪ್ರಕೃತಿ ಆಟಕ್ಕೆ ದುರಂತವೇ ನಡೆದು ಹೋಯ್ತು!
ರಾಹುಲ್ ಗಾಂಧಿ ಹೆಸರಿಗೆ ತನ್ನೆಲ್ಲಾ ಆಸ್ತಿ ಬರೆದುಕೊಟ್ಟ 78ರ ವೃದ್ಧೆ!
ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಹೆಜ್ಜೇನು ದಾಳಿ: ಐವರಿಗೆ ಗಾಯ, ಮಹಿಳೆಯ ಸ್ಥಿತಿ ಗಂಭೀರ