ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ದೇಶವೇ 'ಕತಾರ್': ಅಧಿಕೃತ ಘೋಷಣೆ - Mahanayaka
10:49 PM Wednesday 19 - March 2025

ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ದೇಶವೇ ‘ಕತಾರ್’: ಅಧಿಕೃತ ಘೋಷಣೆ

18/03/2025

ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ದೇಶ ಯಾವುದು ಎಂಬ ಪ್ರಶ್ನೆಗೆ ಉತ್ತರ ಲಭಿಸಿದೆ. ಕತಾರ್ ಈ ಗೌರವಕ್ಕೆ ಪಾತ್ರವಾಗಿದೆ. ಆನ್ ಲೈನ್ ಡಾಟಾಬೇಸ್ ಸಂಸ್ಥೆಯಾದ ನಂಬಿಯೋ ತಯಾರಿಸಿದ ಇತ್ತೀಚಿನ ವರದಿಯ ಪ್ರಕಾರ ಜಗತ್ತಿನ ಅತ್ಯಂತ ಸುರಕ್ಷಿತ ರಾಷ್ಟ್ರದ ಪಟ್ಟಿಯಲ್ಲಿ ಕತಾರ್ ಗೆ ಮೊದಲ ಸ್ಥಾನ ಲಭಿಸಿದೆ.


Provided by

ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಯುಎಇ ಗೆ ಲಭಿಸಿದರೆ 3ನೇ ಸ್ಥಾನ ತೈವಾನ್ ಪಾಲಾಗಿದೆ. ಅಪರಾಧ ಕೃತ್ಯಗಳ ಪ್ರಮಾಣವನ್ನು ಪರಿಗಣಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ.

ವಿಶೇಷವಾಗಿ ರಾತ್ರಿ ಮತ್ತು ಹಗಲಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಮತ್ತು ಪುರುಷರ ಸುರಕ್ಷತೆಯನ್ನು ಪರಿಗಣಿಸಿ ಈ ಪಟ್ಟಿಯಲ್ಲಿ ಪರಿಗಣಿಸಲಾಗಿದೆ. ಹಾಗೆಯೇ ಇನ್ನಿತರ ಅಪರಾಧ ಪ್ರಕರಣಗಳನ್ನೂ ಪರಿಗಣಿಸಲಾಗಿದೆ. ಇವೆಲ್ಲವನ್ನೂ ಲೆಕ್ಕ ಹಾಕಿದರೆ ಅತ್ಯಂತ ಸುರಕ್ಷಿತ ರಾಷ್ಟ್ರವಾಗಿ ಖತರ್ ಒಂದನೇ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ವರದಿ ತಿಳಿಸಿದೆ. ಒಟ್ಟು 142 ರಾಷ್ಟ್ರಗಳನ್ನು ಈ ಸರ್ವೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ