ಸಚಿವ ಆರ್.ಅಶೋಕ್ ಪಿಎ ವಿರುದ್ಧ ಲಂಚದ ಆರೋಪ ಮಾಡಿದ್ದ ಸಬ್ ರಿಜಿಸ್ಟ್ರಾರ್ ಅಮಾನತು - Mahanayaka
5:46 AM Thursday 12 - December 2024

ಸಚಿವ ಆರ್.ಅಶೋಕ್ ಪಿಎ ವಿರುದ್ಧ ಲಂಚದ ಆರೋಪ ಮಾಡಿದ್ದ ಸಬ್ ರಿಜಿಸ್ಟ್ರಾರ್ ಅಮಾನತು

r ashok pa
09/07/2021

ಚಿಕ್ಕಮಗಳೂರು: ಕಂದಾಯ ಸಚಿವ ಆರ್.ಅಶೋಕ್ ಪಿಎ ವಿರುದ್ಧ ಲಂಚದ ಆರೋಪ ಮಾಡಿದ್ದ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

2005-6ರಲ್ಲಿ ಚೆಲುವರಾಜ್ ಅವರು ಮಂಡ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಕರ್ತವ್ಯ ಲೋಪ ಮಾಡಿದ್ದಾರೆ ಎನ್ನುವ ಕಾರಣ ನೀಡಿ ಚೆಲುವ ರಾಜ್ ಸೇರಿದಂತೆ 7 ಮಂದಿಯನ್ನು 2021ರಲ್ಲಿ ವಜಾ ಮಾಡಲಾಗಿದೆ!

ಹಣ ಬ್ಯಾಂಕಿಗೆ ಸಂದಾಯವಾದ ಬಳಿಕ ಚಲನ್ ತಿದ್ದಿದ್ದ ಆರೋಪದಡಿ ದೂರು ದಾಖಲಾಗಿತ್ತು. ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಚೆಲುವರಾಜ್ ಸೇರಿ 7 ಜನರು ಸೇವೆಯಿಂದ ವಜಾಗೊಳಿಸಿ ಶಿಸ್ತು ಪ್ರಾಧಿಕಾರ ಹಾಗೂ ನೋಂದಣಿ ಪರಿವೀಕ್ಷಕ ಮೋಹನ್ ರಾಜ್ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.

ಕೆಲವು ತಿಂಗಳ ಹಿಂದೆಯಷ್ಟೇ ಕಂದಾಯ ಸಚಿವ ಆರ್.ಅಶೋಕ್ ಅವರ ಆಪ್ತ ಸಹಾಯಕ ತನ್ನ ಬಳಿ ಲಂಚ ಕೇಳಿದ್ದರು ಎಂದು ಚೆಲುವರಾಜ್ ಆರೋಪಿಸಿದ್ದರು. ಈ ಆರೋಪದ ಬಳಿಕ ಇದೀಗ ಅವರನ್ನು 2005-6ರಲ್ಲಿ ನಡೆದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ