ಇಬ್ಬರು ಮಕ್ಕಳು  ಅತ್ತೆ, ಪತ್ನಿಯನ್ನು ರಾಡ್ ನಿಂದ ಹೊಡೆದು ಭೀಕರಹತ್ಯೆ ಮಾಡಿದ ಪಾಪಿ - Mahanayaka

ಇಬ್ಬರು ಮಕ್ಕಳು  ಅತ್ತೆ, ಪತ್ನಿಯನ್ನು ರಾಡ್ ನಿಂದ ಹೊಡೆದು ಭೀಕರಹತ್ಯೆ ಮಾಡಿದ ಪಾಪಿ

saraguru
29/04/2021

ಮೈಸೂರು:  ವ್ಯಕ್ತಿಯೋರ್ವ ಮನೆ ಮಂದಿಯ ಮೇಲೆಯೇ ದಾಳಿ ನಡೆಸಿ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆಸಿದ್ದು, ಮದ್ಯದ ಅಮಲಿನಲ್ಲಿ ತನ್ನ ಗರ್ಭಿಣಿ ಪತ್ನಿ, ಇಬ್ಬರು ಸಣ್ಣ ಮಕ್ಕಳು ಅತ್ತೆಯನ್ನು ಆರೋಪಿ ಹತ್ಯೆ ಮಾಡಿದ್ದಾನೆ.

ಸರಗೂರು ಠಾಣಾ ವ್ಯಾಪ್ತಿಯ ಚಾಮೇಗೌಡನಹುಂಡಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದ್ದು, ಆರೋಪಿಯು ಕಬ್ಬಿಣದ ರಾಡ್ ನಿಂದ ಥಳಿಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.

60 ವರ್ಷ ವಯಸ್ಸಿನ ಅತ್ತೆ ಕೆಂಪಾಜಮ್ಮ, 28 ವರ್ಷ ವಯಸ್ಸಿನ ಗರ್ಭಿಣಿ ಪತ್ನಿ ಗಂಗಾ, ಮಕ್ಕಳಾದ 4 ವರ್ಷ ವಯಸ್ಸಿನ ರೋಹಿತ್ ಮತ್ತು 2 ವರ್ಷದ ಸಾಮ್ರಾಟ್ ಹತ್ಯೆಗೀಡಾದವರಾಗಿದ್ದಾರೆ. ತಂದೆ ಮಣಿಕಂಠಸ್ವಾಮಿ ಹತ್ಯೆ ಮಾಡಿದ ಆರೋಪಿಯಾಗಿದ್ದು, ಹತ್ಯೆ ಮಾಡಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಸರಗೂರು ಪಿಎಸ್ ಐ ದಿವ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್.ಡಿ.ಕೋಟೆ ಸರಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇತ್ತೀಚಿನ ಸುದ್ದಿ