ನಟಿ ರಾಗಿಣಿ ದ್ವಿವೇದಿಗೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
ಸಿನಿಡೆಸ್ಕ್: ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಅವರಿಗೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರಕಿದ್ದು, ಈ ವಿಚಾರವನ್ನು ರಾಗಿಣಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.
ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ರಾಗಿಣಿ ದ್ವಿವೇದಿ ಅವರು ಫೋಟೋ ಹಂಚಿಕೊಂಡಿದ್ದು, ಕೆಂಪು ಬಣ್ಣದ ಸಾರಿ ಉಟ್ಟು ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಾನು ಮಾಡಿದ ಸಮಾಜಮುಖಿ ಕೆಲಸ ಮತ್ತು ಸೇವೆಯಿಂದ ಈ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಬಹಳ ಹೆಮ್ಮೆಯಾಗುತ್ತದೆ ಎಂದು ರಾಗಿಣಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸಮಯದಲ್ಲಿ ಜನರಿಗೆ ಸಹಾಯವಾಗಲು ನನ್ನೊಂದಿಗೆ ಹಗಲು ರಾತ್ರಿ ಶ್ರಮಿಸಿದ ಇಡೀ ತಂಡಕ್ಕೆ ಧನ್ಯವಾಗಳನ್ನು ಹೇಳುತ್ತೇನೆ ಎಂದು ಅವರು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಳು:
ಕೊರೊನಾದಿಂದ ತತ್ತರಿಸಿರುವ ಜನರಿಗೆ ನಟಿ ರಾಗಿಣಿ ದ್ವಿವೇದಿ ನೆರವು
ನಾನು ತಪ್ಪು ಮಾಡಿಲ್ಲ ಎಂದು ಪದೇ ಪದೇ ಹೇಳುವ ಅಗತ್ಯವಿಲ್ಲ | ನಟಿ ರಾಗಿಣಿ
ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ಬಂದ ಮೇಘ ಶೆಟ್ಟಿ | ಅನು ಪಾತ್ರ ಮುಂದೆ ಯಾರು ನಿರ್ವಹಿಸಲಿದ್ದಾರೆ?