ಹಾಸ್ಟೆಲ್ ನ ರಹಸ್ಯ ಮುಚ್ಚಿ ಹಾಕಲು ಅತ್ಯಾಚಾರದ ಕಥೆ ಕಟ್ಟಿದ ವಿದ್ಯಾರ್ಥಿನಿ?
ಮೈಸೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ಹಾಗೂ ಹಲ್ಲೆ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು, ಯುವಕ ಹಾಗೂ ಯುವತಿಯ ಪ್ರೇಮ ಪ್ರಕರಣ ಇದಾಗಿದೆ ಎನ್ನುವುದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ವರದಿಯಾಗಿದೆ.
28 ವರ್ಷ ವಯಸ್ಸಿನ ಯುವತಿ ಹಾಗೂ 21 ವರ್ಷ ವಯಸ್ಸಿನ ಯುವಕನಿಗೆ ಈ ಮೊದಲಿಂದಲೂ ಪರಿಚಯವಿತ್ತು ಎನ್ನಲಾಗಿದೆ. ಹೀಗಾಗಿ ಯುವತಿಯು ಆರೋಪಿಯನ್ನು ತನ್ನ ಹಾಸ್ಟೆಲ್ ಗೆ ಕರೆದಿದ್ದಳು ಎನ್ನಲಾಗಿದೆ. ಹಾಸ್ಟೆಲ್ ನಲ್ಲಿ ಯಾರೂ ಇಲ್ಲದ ವೇಳೆ ಇವರಿಬ್ಬರು ಜೊತೆಯಾಗಿದ್ದರು. ಆದರೆ ಸಹಪಾಠಿಗಳು ಬಂದ ತಕ್ಷಣವೇ ಯುವಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನೂ ಈ ವಿಚಾರ ಹಿರಿಯರಿಗೆ ತಿಳಿದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಯುವತಿ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ. ದೂರು ದಾಖಲಿಸುವುದಕ್ಕೂ ಮೊದಲು, ನೀನು ತಪ್ಪಿಸಿಕೋ ಎಂದು ಯುವಕನಿಗೆ ಯುವತಿ ಹೇಳಿದ್ದಳು ಎಂದು ವರದಿಯಾಗಿದೆ.
ಮೈಸೂರಿನಲ್ಲಿ ಇತ್ತೀಚೆಗಷ್ಟೇ ಅತ್ಯಾಚಾರ ಪ್ರಕರಣವೊಂದು ನಡೆದಿದ್ದುದರಿಂದಾಗಿ ಮತ್ತೊಂದು ಕೇಸ್ ದಾಖಲಿಸಿರುವುದು ಪೊಲೀಸರಿಗೂ ಚಾಲೆಂಜ್ ಆಗಿತ್ತು. ಹೀಗಾಗಿ ಪೊಲೀಸರು ಆರೋಪಿ ಹಾಗೂ ಯುವತಿಯ ಕಾಲ್ ಲಿಸ್ಟ್ ಹಾಗೂ ಮೆಸೆಜ್ ಲಿಸ್ಟ್ ನೋಡಿದಾಗ ಇವರ ಆಟಗಳೆಲ್ಲವೂ ಬಯಲಾಗಿದೆ ಎಂದು ತಿಳಿದು ಬಂದಿದೆ.
ಇನ್ನಷ್ಟು ಸುದ್ದಿಗಳು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ರದ್ದಾಗಲಿ | ಸಿಪಿಐ(ಎಂ) ಒತ್ತಾಯ
ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ
1ರಿಂದ 5ನೇ ತರಗತಿವರೆಗೆ ಶಾಲೆಗಳನ್ನು ತೆರೆಯುವ ಚಿಂತನೆ ಸದ್ಯಕ್ಕಿಲ್ಲ | ಸಚಿವ ಸುಧಾಕರ್
ಅಫ್ಘಾನಿಸ್ತಾನದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ಹುಡುಕಾಡುತ್ತಿರುವ ತಾಲಿಬಾನಿಗಳು | ಡೆತ್ ಸ್ಕ್ವಾಡ್ ಆರಂಭ
ವಿಷಜಂತು ಕಡಿದು ತಂದೆ, ಮಗ ಇಬ್ಬರೂ ಸಾವು
ಸಾ.ರಾ.ಮಹೇಶ್ ಒಡೆತನದ ಜಾಗಗಳ ಮರು ಸರ್ವೇಗೆ ಆದೇಶ: ರೋಹಿಣಿ ಸಿಂಧೂರಿ ಆರೋಪಗಳಿಗೆ ಮರುಜೀವ
ಜನ್ಮ ನೀಡಿದ ತಂದೆಗೆ ನಡು ಬೀದಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಇಬ್ಬರು ಮಕ್ಕಳು!