ರಾಹುಲ್ ಗಾಂಧಿಯನ್ನು ನೋಡಲು ದಾರಿಯುದ್ದಕ್ಕೂ ಕಾದು ಕುಳಿತ ಜನ!
ಶ್ರೀರಂಗಪಟ್ಟಣದಿಂದ ಪಾಂಡವಪುರಕ್ಕೆ ಸಾಗಿದ ಭಾರತ ಐಕ್ಯತಾ ಯಾತ್ರೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನೋಡಲು ಹಳ್ಳಿಗಳಿಂದ ಬಂದು ದಾರಿ ಉದ್ದಕ್ಕೂ, ಹಿರಿಯರು, ಮಕ್ಕಳು, ಯುವಕರು, ಮಹಿಳೆಯರು ಕಾತುರದಿಂದ ಕಾಯುತ್ತಿದ್ದ ದೃಶ್ಯ ಕಂಡು ಬಂತು.
ಈ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ಹಂಚಿಕೊಂಡಿದ್ದು, ಶ್ರೀರಂಗಪಟ್ಟಣದಿಂದ ಪಾಂಡವಪುರಕ್ಕೆ ಸಾಗಿದ ಭಾರತ ಐಕ್ಯತಾ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರನ್ನು ನೋಡಲು ಹಳ್ಳಿಗಳಿಂದ ಬಂದು ದಾರಿ ಉದ್ದಕ್ಕೂ, ಹಿರಿಯರು, ಮಕ್ಕಳು, ಯುವಕರು, ಮಹಿಳೆಯರು ಕಾತುರದಿಂದ ತಮ್ಮ ಭವಿಷ್ಯದ ನಾಯಕನನ್ನು ಭೇಟಿ ಮಾಡಲು ಕಾತುರದಿಂದ ಕಾಯುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಈ ಯಾತ್ರೆಯಲ್ಲಿ ಹಲವಾರು ಜನರು ದೂರದ ಊರುಗಳಿಂದ ಬಂದು ಭಾಗಿಯಾಗುತ್ತಿದ್ದಾರೆ, ಭಾವನೆಗಳನ್ನು, ಸಂಬಂಧಗಳನ್ನು ಬೆಸೆಯುವ ಯಾತ್ರೆ ಇದಾಗಿದೆ ಎಂದು ಪ್ರಿಯಾಂಕ್ ಖರ್ಗೆ ಬಣ್ಣಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ಕಾರ್ಯಕರ್ತರ ಜೊತೆಗೆ ಪ್ರಿಯಾಂಕ್ ಖರ್ಗೆ
ಈ ಭಾರತ ಐಕ್ಯತಾ ಯಾತ್ರೆ ಲಕ್ಷಾಂತರ ಜನರ ಬೆಂಬಲದೊಂದಿಗೆ, ದೇಶವನ್ನು ಒಗ್ಗೂಡಿಸಬೇಕು ಎಂಬ ಛಲದೊಂದಿಗೆ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸಮಸಮಾಜದ ನಿರ್ಮಾಣ ಮಾಡುವ ಈ ಐತಿಹಾಸಿಕ ಭಾರತ ಐಕ್ಯತಾ ಯಾತ್ರೆಗೆ ನೀವು ಒಂದು ಹೆಜ್ಜೆ ಹಾಕಿ ಬನ್ನಿ ಎಂದು ಪ್ರಿಯಾಂಕ್ ಖರ್ಗೆ ಕರೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka