ತಾನು ಪ್ರಧಾನಿಯಾದರೆ ಮೊದಲು ಮಾಡುವ ಕೆಲಸ ಏನು ಎಂದು ತಿಳಿಸಿದ ರಾಹುಲ್ ಗಾಂಧಿ
ನವದೆಹಲಿ: ನಾನು ಭಾರತದ ಪ್ರಧಾನಿಯಾದರೆ ಮೊದಲು ಉದ್ಯೋಗ ಸೃಷ್ಟಿಯತ್ತ ಗಮನಹರಿಸುವೆ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಹೇಳಿದ್ದ, ವೆಬಿನಾರ್ ಒಂದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಅಮೇರಿಕಾದ ಮಾಜಿ ರಾಯಭಾರಿ, ಪ್ರಸ್ತುತ ಹಾರ್ವರ್ಡ್ ಕೆನಡಿ ಸ್ಕೂಲ್ನಲ್ಲಿ ಪ್ರಾಧ್ಯಾಪಕರಾಗಿರುವ ನಿಕೋಲಾಸ್ ಬರ್ನ್ಸ್, ಒಂದುವೇಳೆ ನೀವು ಭಾರತದ ಪ್ರಧಾನಿಯಾದರೆ? ಎಂದು ಪ್ರಶ್ನಿಸಿದ್ದು, ಈ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಿದರು.
ನಾನು ಭಾರತದ ಪ್ರಧಾನಿಯಾದ್ದಲ್ಲಿ ಅಭಿವೃದ್ಧಿ ಕೇಂದ್ರಿತ ಯೋಜನೆಗಳಿಗಿಂತ ಹೆಚ್ಚಾಗಿ ಉದ್ಯೋಗ ಕೇಂದ್ರಿತ ಯೋಜನೆಗಳಿಗೆ ಗಮನ ನೀಡುತ್ತೇನೆ. ನಾವು ಅಭಿವೃದ್ದಿ ಹೊಂದಬೇಕೆಂಬುದು ಸರಿ. ಆದರೆ ಎಲ್ಲ ವಲಯದಲ್ಲಿಯೂ ಉದ್ಯೋಗ ಸೃಷ್ಟಿ ಅತ್ಯಗತ್ಯ. ಈ ನಿಟ್ಟಿನಲ್ಲಿ ನಾನು ಉದ್ಯೋಗ ಸೃಷ್ಟಿಯೆಡೆ ಅಧಿಕ ಒಲವು ತೋರುವೆ ಎಂದು ಹೇಳಿದರು.
‘ಭಾರತದಲ್ಲಿ ಪ್ರಜಾಪ್ರಭುತ್ವದ ಭವಿಷ್ಯದ ವಿಚಾರದಲ್ಲಿ ಅಮೇರಿಕಾ ಮೌನವಹಿಸಿದೆ. ಸ್ವಾತಂತ್ರ್ಯದ ಗಾಢ ಪರಿಕಲ್ಪನೆಯನ್ನು ಸಾರುವ ಸಂವಿಧಾನವನ್ನು ಅಮೇರಿಕಾವು ಹೊಂದಿದ್ದರೂ ಸಂವಿಧಾನದಲ್ಲಿ ಹೇಳಲಾದ ಕಲ್ಪನೆಗಳನ್ನು ಸಮರ್ಥಿಸಲು ಅಮೇರಿಕಾಕ್ಕೆ ಒಂದು ಪ್ರಶ್ನೆಯಾಗಿಯೇ ಉಳಿದಿದೆ ಎಂದು ಅವರು ಅಭಿಪ್ರಾಯಪಟ್ಟರು.