ನೈಟ್ ಕ್ಲಬ್ ನಲ್ಲಿ ರಾಹುಲ್ ಗಾಂಧಿ?:  ಏನಿದು ವೈರಲ್ ವಿಡಿಯೋ? - Mahanayaka

ನೈಟ್ ಕ್ಲಬ್ ನಲ್ಲಿ ರಾಹುಲ್ ಗಾಂಧಿ?:  ಏನಿದು ವೈರಲ್ ವಿಡಿಯೋ?

rahul gandhi
03/05/2022

ನೈಟ್ ಕ್ಲಬ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿದ್ದಾರೆನ್ನಲಾದ  ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಕಠ್ಮಂಡು ನೈಟ್ ಕ್ಲಬ್ ನದ್ದು ಎಂದು ಹೇಳಲಾಗಿದೆ.

12 ಸೆಕೆಂಡ್ ಗಳ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಕಳೆದ ದಿನ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಕಠ್ಮಂಡುವಿಗೆ ತೆರಳಿದ್ದರು ಎನ್ನಲಾಗಿದೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿ, ಭೂಪೇನ್ ಕುನ್ವರ್ ಎಂಬ ನೇಪಾಳಿ ಪ್ರಜೆ ಭಾರತೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್ ಎಲ್‌ಒಡಿ (ಲಾರ್ಡ್ ಆಫ್ ದಿ ಡ್ರಿಂಕ್ಸ್) ಎಂದು ಬರೆದಿದ್ದಾರೆ. ನೇಪಾಳದ ಕಠ್ಮಂಡು ನಗರದಲ್ಲಿರುವ ಪಬ್‌ ನಲ್ಲಿ ರಾಹುಲ್ ಗಾಂಧಿ ಯುವತಿಯೊಬ್ಬಳ ಬಳಿ ಮಾತನಾಡುತ್ತಿರುವ ಮತ್ತು ತಮ್ಮ ಫೋನ್ ಬಳಸುತ್ತಿರುವ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ, ರಾಹುಲ್ ಗಾಂಧಿ ಸಂಸದರಾಗಿ ತೋರಿಸಬೇಕಾದ ಮರ್ಯಾದೆಯನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದೆ. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ  ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ರಾಹುಲ್ ಗಾಂಧಿಯನ್ನು ಅರೆಕಾಲಿಕ ರಾಜಕಾರಣಿ ಎಂದು ಕರೆದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಟೋಲ್ ಸಂಗ್ರಹ: ಫಾಸ್ಟ್ ಟ್ಯಾಗ್ ವ್ಯವಸ್ಥೆ ಶೀಘ್ರವೇ ರದ್ದು!

ವಿವಾಹ ವಾರ್ಷಿಕೋತ್ಸವದಂದೇ ಅಪಘಾತದಲ್ಲಿ ಕಾನ್ ಸ್ಟೇಬಲ್ ಸಾವು

ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಪ್ರತಿಜ್ಞೆ ಸ್ವೀಕರಿಸಿದ ಬಿಜೆಪಿ ಶಾಸಕ

ಕೆಲಸಕ್ಕೆ ಸೇರಿದ ದಿನವೇ ನರ್ಸ್ ಮೇಲೆ ಅತ್ಯಾಚಾರ, ಬರ್ಬರ ಹತ್ಯೆ!

ಶಾವರ್ಮಾ ಸೇವಿಸಿ 16 ವರ್ಷದ ಬಾಲಕಿ ಸಾವು: 36 ಮಂದಿ ಅಸ್ವಸ್ಥ

ಇತ್ತೀಚಿನ ಸುದ್ದಿ