ರಾಹುಲ್ ನ್ಯಾಯ ಯಾತ್ರೆಯಲ್ಲಿ ‘ಕೇಸರಿ’ ಬಾವುಟ ಪ್ರದರ್ಶನ: ಮೋದಿ ಪರ ಘೋಷಣೆ ಕೂಗಿದ ಬಿಜೆಪಿ ಬೆಂಬಲಿಗರ ಕೈಕುಲುಕಿದ ರಾಹುಲ್ ಗಾಂಧಿ; ‘ಪ್ರೀತಿಯ ಶಕ್ತಿ’ ಎಂದ ಕಾಂಗ್ರೆಸ್

12/02/2024
ಛತ್ತೀಸ್‌ಗಢದ ಕೊರ್ಬಾದಿಂದ ಇಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭವಾಗಿದೆ. ಯಾತ್ರೆಯ ವೇಳೆ ರಾಹುಲ್ ಗಾಂಧಿಗೆ ಬಿಜೆಪಿ ಕಾರ್ಯಕರ್ತರು ಕೇಸರಿ ಬಾವುಟವನ್ನು ಪ್ರದರ್ಶಿಸಿದ್ದಾರೆ. ಈ ವೇಳೆ ತೆರೆದ ಜೀಪಿನಿಂದ ಇಳಿದು ಬಂದ ರಾಹುಲ್ ಗಾಂಧಿ ಅವರು ಬಿಜೆಪಿ ಕಾರ್ಯಕರ್ತರ ಹಸ್ತಲಾಘವ ಮಾಡಿದ್ದಾರೆ.
ಯಾತ್ರೆಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಸಾವಿರಾರು ಮಂದಿ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಯಾತ್ರೆ ವೇಳೆ ಮಾತನಾಡಿದ ರಾಹುಲ್ ಗಾಂಧಿ ರಾಮಮಂದಿರ ಪ್ರಾಣ ಪ್ರತಿಷ್ಠಾಪಣೆ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳಿಗೆ ಆಹ್ವಾನ ಕಳುಹಿಸಿರುವ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಿಜೆಪಿ ಕಾರ್ಯಕರ್ತರನ್ನು ಯಾತ್ರೆಯ ವಿರುದ್ಧ ಪ್ರತಿಭಟಿಸಲು ಕಳುಹಿಸಲಾಗಿದೆ, ಆದರೆ ರಾಹುಲ್ ಗಾಂಧಿ ಪ್ರತಿಭಟನಾಕಾರರನ್ನು ಭೇಟಿಯಾದಾಗ ಅವರ ಮುಖದಲ್ಲಿನ ಸಂತೋಷವನ್ನು ನೋಡಬೇಕಾಗಿದೆ. ಪ್ರೀತಿಯ ಶಕ್ತಿಯನ್ನು ಈ ವಿಡಿಯೋದಲ್ಲಿ ನೋಡಿ ಎಂದು ಭಾರತ್ ಜೋಡೋ ನ್ಯಾಯ ಯಾತ್ರೆ ಕುರಿತ ಪೋಸ್ಟ್‌ನಲ್ಲಿ ಹೇಳಲಾಗಿದೆ.