‘ನ್ಯಾಯ್ ಯಾತ್ರೆ’ ವೇಳೆ 200 ಕೆಜಿ ಕಲ್ಲಿದ್ದಲು ತುಂಬಿದ ಸೈಕಲ್ ತಳ್ಳಿಕೊಂಡು ಹೋದ ರಾಹುಲ್ ಗಾಂಧಿ

‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯು ಜಾರ್ಖಂಡ್‌ನಲ್ಲಿ ಸಾಗುತ್ತಿದೆ. ಈ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ.
ಈ ದೃಶ್ಯದಲ್ಲಿ ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ 200 ಕೆ.ಜಿ. ಕಲ್ಲಿದ್ದಲು ತುಂಬಿದ್ದ ಯುವಕನ ಸೈಕಲ್ ಅನ್ನು ರಾಹುಲ್ ಗಾಂಧಿ ತಳ್ಳಿಕೊಂಡು ಹೋಗಿದ್ದಾರೆ. ಈ ವಿಷಯಕ್ಕೆ ಕುರಿತಂತೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್, ಪ್ರತಿದಿನವು 30 ರಿಂದ 40 ಕಿಲೋಮೀಟರ್ ನಷ್ಟು 200 ರಿಂದ 250 ಕೆಜಿ ಭಾರದ ಸೈಕಲ್ ನ್ನು ಹಿಡಿದು ನಡೆಯಬೇಕು. ಕಠಿಣ ಪರಿಶ್ರಮ ಪಟ್ಟರು ಈ ಕೆಲಸದಿಂದ ಬರುವ ಆದಾಯ ತುಂಬಾ ಕಡಿಮೆ ಎಂದು ಕಾರ್ಮಿಕರು ಹೇಳಿರುವುದಾಗಿ ಪೋಸ್ಟ್ ಮಾಡಿದೆ.
ದೇಶವು ಕಾರ್ಮಿಕರಿಗೆ ಅವರ ಶ್ರಮಕ್ಕೆ ತಕ್ಕಂತೆ ವೇತನ ನೀಡಬೇಕು. ಅವರಿಗೆ ನ್ಯಾಯ ಸಿಗಬೇಕು. ಇದು ಭಾರತ ಜೋಡೋ ನ್ಯಾಯ್ ಯಾತ್ರೆ ಗುರಿಯಾಗಿದೆ. ಜನರ ಸಮಸ್ಯೆಗಳನ್ನು ಆಲಿಸುವುದು, ಅವರಿಗೆ ನ್ಯಾಯ ಒದಗಿಸಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದೆ. ಫೆಬ್ರುವರಿ 2ರಂದು ಪಶ್ಚಿಮ ಬಂಗಾಳದಿಂದ ಜಾರ್ಖಂಡ್ ಗೆ ಭಾರತ ಜೋಡೋ ನ್ಯಾಯ್ ಯಾತ್ರೆಯು ಪ್ರವೇಶಿಸಿದೆ.