11:05 AM Wednesday 12 - March 2025

ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿ ಕಾಲು ಕಳೆದುಕೊಂಡ ಯುವಕ

shivamogga news
29/06/2021

ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಡಿಗೆ ಕಾಲು ಸಿಲುಕಿದ ಪರಿಣಾಮ ಯುವಕನೋರ್ವನ ಕಾಲು ತುಂಡಾಗಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು,  ಫ್ಲಾಟ್ ಫಾರಂನಲ್ಲಿದ್ದ ವೇಳೆ ಕಾಲು ಜಾರಿ ರೈಲಿನಡಿಗೆ ಸಿಲುಕಿರುವುದಾಗಿ ತಿಳಿದು ಬಂದಿದೆ.

ಕಾರವಾರ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕವಚೂರು ಗ್ರಾಮದ 18 ವರ್ಷ ವರ್ಷ ವಯಸ್ಸಿನ  ನವೀನ್ ಕಾಲು ಕಳೆದುಕೊಂಡ ಯುವಕನಾಗಿದ್ದು, ರೈಲಿನಡಿಗೆ ಸಿಲುಕಿ ಕಾಲು ತಂಡಾಗಿ ಗಂಭೀರವಾಗಿ ಗಾಯಗೊಂಡಿದ್ದ ನವೀನ್ ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಳೆ ನೀರಿನಿಂದಾಗಿ ಫ್ಲಾಟ್ ಫಾರ್ಮ್ ಜಾರುತ್ತಿತ್ತು.  ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿದ್ದ ನವೀನ್ ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸುತ್ತಿರುವ ವೇಳೆ, ಕಾಲು ಜಾರಿ ರೈಲಿಗೆ ಕಾಲು ಸಿಕ್ಕಿದ್ದು, ಪರಿಣಾಮವಾಗಿ ನವೀನ್ ಕಾಲು ಕಳೆದುಕೊಂಡಿದ್ದಾರೆ.

ಘಟನೆ ವೇಳೆ ನವೀನ್  ಜೊತೆ ಇನ್ನೊಬ್ಬ ಯುವಕ ಇದ್ದ ಎಂದು ಹೇಳಲಾಗಿದ್ದು, ಘಟನೆ ನಡೆದ ವೇಳೆ ಆತ ರೈಲಿನಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ

ಇತ್ತೀಚಿನ ಸುದ್ದಿ

Exit mobile version