ರೈಲಿನಲ್ಲಿ ಭಾರೀ ಸ್ಫೋಟಕ ಸಾಗಿಸುತ್ತಿದ್ದ ಮಹಿಳೆ ವಶಕ್ಕೆ; ಈ ಸ್ಫೋಟಕ ಸಾಗಿಸುತ್ತಿದ್ದರ ಹಿಂದಿನ ಉದ್ದೇಶ ಏನು?
ಕೋಝಿಕ್ಕೋಡ್: ಮಂಗಳೂರು ಸೂಪರ್ ಫಾಸ್ಟ್ ರೈಲ್ ನಲ್ಲಿ ಮಹಿಳೆಯೊರ್ವರು ಭಾರೀ ಪ್ರಮಾಣ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಘಟನೆ ನಡೆದಿದ್ದು, ಈ ಸ್ಫೋಟಕ ವಸ್ತುತಗಳನ್ನು ರೈಲು ಅಧಿಕಾರಿಗಳು ಕೋಝಿಕ್ಕೋಡ್ ನಲ್ಲಿ ವಶಕ್ಕೆ ಪಡೆದಿದ್ದಾರೆ.
ರೈಲು ಕೋಝಿಕ್ಕೋಡ್ ನಿಲ್ದಾಣಕ್ಕೆ ತಲುಪಿದಾಗ ಶೋಧ ನಡೆಸಲಾಗಿದ್ದು, ಈ ವೇಳೇ ಸೀಟಿನಡಿಯಲ್ಲಿ ಪೆಟ್ಟಿಗೆಯಲ್ಲಿ ಈ ವಸ್ತುಗಳು ಪತ್ತೆಯಾಗಿವೆ. ಈ ವಸ್ತುಗಳು ಚೆನ್ನೈ ಮೂಲದ ಮಹಿಳೆಗೆ ಸೇರಿದವುಗಳಾಗಿವೆ ಎನ್ನುವುದು ಈ ವೇಳೆ ಅಧಿಕಾರಿಗಳಿಗೆ ತಿಳಿದು ಬಂದಿದೆ.
117 ಜಿಲೆಟಿನ್ ಸ್ಟಿಕ್, 350ಡಿಟರ್ನೇಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ವೇಳೆ ಮಹಿಳೆಯೊಬ್ಬರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಈ ಸ್ಫೋಟಕಗಳಿಗೂ ಮಹಿಳೆಗೂ ಸಂಬಂಧ ಇದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ವಶಕ್ಕೆ ಪಡೆದಿರುವ ಮಹಿಳೆಯು ಚೆನ್ನೈನಿಂದ ಕಣ್ಣೂರಿನ ತಲಶ್ಯೆರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಸ್ಫೋಟಕಗಳನ್ನು ಎಲ್ಲಿಂದ ತರಲಾಗಿತ್ತು. ಎಲ್ಲಿಗೆ ಕೊಂಡೊಯ್ಯಲಾಗುತ್ತಿತ್ತು. ಯಾವ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿತ್ತು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.