ರೈಲು ನಿಲ್ಲಿಸಿ ಎಣ್ಣೆ ಹೊಡೆಯಲು ಹೋದ ಲೋಕೋ ಪೈಲೆಟ್
ಬಿಹಾರ: ರೈಲಿನ ಲೋಕೋ ಪೈಲಟ್ ಅರ್ಧ ದಾರಿಯಲ್ಲಿ ರೈಲು ನಿಲ್ಲಿಸಿ ಟೀ ಕುಡಿಯಲು ತೆರಳಿದ ಸುದ್ದಿ ಇತ್ತೀಚಿಗೆ ವರದಿಯಾಗಿತ್ತು. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ನಡೆದಿದೆ.
ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಲೊಕೊ ಪೈಲಟ್ ಅರ್ಧ ದಾರಿಯಲ್ಲಿ ರೈಲು ನಿಲ್ಲಿಸಿ ಮದ್ಯ ಸೇವಿಸಲು ತೆರಳಿದ್ದಾನೆ. ಬಿಹಾರದ ಸಮಸ್ತಿಪುರ್-ಖಗಾರಿಯಾ ನಡುವಿನ ರೈಲು ಮಾರ್ಗದ ಹಸನ್ ಪುರ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ನಿಲ್ದಾಣದಲ್ಲಿ ನಿಂತ ರೈಲು ಎಷ್ಟೇ ಹೊತ್ತಾದರೂ ಹೊರಡದ ಹಿನ್ನೆಲೆ ರೈಲಿನಲ್ಲಿ ಲೋಕೋ ಪೈಲೆಟ್ ಎಲ್ಲಿದ್ದಾನೆಂದು ಹುಡುಕಿದಾಗ ರೈಲು ನಿಲ್ಲಿಸಿ ಈತ ಎಲ್ಲೋ ಹೋಗಿರುವುದು ಗೊತ್ತಾಗಿದೆ. ತಕ್ಷಣ ರೈಲ್ವೆ ಅಧಿಕಾರಿಗಳು ಆತನಿಗಾಗಿ ಹುಡುಕಾಟ ಆರಂಭಿಸಿದಾಗ, ನಿಲ್ದಾಣದ ಹಿಂಬದಿಯಲ್ಲಿ ಎಣ್ಣೆ ಮತ್ತಿನಲ್ಲಿ ಬಿದ್ದಿದ್ದ. ಆತನ ಕೈಯಲ್ಲಿ ಅರ್ಧ ಕುಡಿದ ಮದ್ಯದ ಬಾಟಲಿ ಕೂಡ ಇತ್ತು.
ವಿಶೇಷವೆಂದರೆ ಬಿಹಾರದಲ್ಲಿ ಸಂಪೂರ್ಣ ಮದ್ಯ ನಿಷೇಧ ಆಗಿ ಮೂರು ವರ್ಷ ಕಳೆದರೂ, ರೈಲು ಚಾಲಕ ನಿಲ್ದಾಣ ಬಳಿಯೇ ಎಣ್ಣೆ ಹಾಕಿ ಬಾಟಲಿ ಸಮೇತ ಮಲಗಿದ್ದ.ತಕ್ಷಣ ರೈಲು ಹೊರಡಲು ಅಧಿಕಾರಿಗಳು ಬದಲಿ ಲೋಕೋ ಪೈಲಟ್ ವ್ಯವಸ್ಥೆ ಮಾಡಿದರು. ರೈಲ್ವೆ ಪೊಲೀಸರು ಎಣ್ಣೆ ಮತ್ತಿನಲ್ಲಿದ್ದ ಪೈಲೆಟ್ ನ್ನು ಬಂಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ನೀಡಿದ ಕಟ್ಟುನಿಟ್ಟಿನ ಸೂಚನೆ ಏನು?
ದೂರು ನೀಡಲು ಬಂದಿದ್ದ ಅತ್ಯಾಚಾರ ಸಂತ್ರಸ್ತೆಯ ಮೇಲೆ ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ!
ಅಂತ್ಯಕ್ರಿಯೆಗೆ ಕೆಲವೇ ನಿಮಿಷ ಇರುವಾಗ ಶವಪೆಟ್ಟಿಗೆಯೊಳಗಿನಿಂದ ಕೇಳಿತು ಬಡಿಯುವ ಶಬ್ದ!
ಕೊನೆಗೂ ತಾಯಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್
ಕ್ಯಾಂಡಲ್ ಹಚ್ಚುವ ವೇಳೆ ಸ್ಕರ್ಟ್ ಗೆ ಬೆಂಕಿ ತಗುಲಿ ವಿದ್ಯಾರ್ಥಿನಿ ಸಾವು