11:32 AM Wednesday 12 - March 2025

ರೈಲ್ವೇ ನಿಲ್ದಾಣದ ಶೌಚಾಲಯದಲ್ಲಿ ಯುವತಿ ಮೇಲೆ ಅತ್ಯಾಚಾರ

uttar pradesh
21/03/2022

ಉತ್ತರ ಪ್ರದೇಶದ ಪ್ರತಾಪ್‌ ಗಢ್ ರೈಲು ನಿಲ್ದಾಣದ  ಸಾರ್ವಜನಿಕ ಶೌಚಾಲಯದಲ್ಲಿ 20 ವರ್ಷದ ಮಹಿಳೆಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

ಮಾರ್ಚ್ 19ರಂದು ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ: ಮಹಿಳೆ ಮತ್ತು ಆಕೆಯ ಪತಿ ರೈಲಿಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ಗಂಡ ಟೀ ಖರೀದಿಸಲು ಪತ್ನಿಯನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದ. ಈ ವೇಳೆ ಮಹಿಳೆ ಶೌಚಾಲಯಕ್ಕೆ ಹೋಗಿದ್ದು,  ಅಲ್ಲಿ  ಆರೋಪಿಯು ಕೀಲಿಕೈ ನೀಡಿ, ವಾಹನ ನಿಲುಗಡೆ ಸ್ಥಳದ ಬಳಿ ಸ್ವಚ್ಛ ಶೌಚಾಲಯವಿದ್ದು ಅದನ್ನು ಉಪಯೋಗಿಸಿಕೊಳ್ಳಬಹುದು ಎಂದು ಹೇಳಿದ್ದಾನೆ.  ಮಹಿಳೆ ಶೌಚಾಲಯಕ್ಕೆ ಹೋದಾಗ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಮಹಿಳೆಯ ಪತಿ ಸ್ಥಳಕ್ಕೆ ಬಂದು ಮಹಿಳೆಯನ್ನು ರಕ್ಷಿಸಿದ್ದಾನೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಯ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಹಿಂದಿಕ್ಕಿದ  ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್

ಪಾನ್‌-ಆಧಾರ್ ಲಿಂಕ್: ಮಾರ್ಚ್ 31ಕೊನೆ ದಿನಾಂಕ

ಫುಟ್ಬಾಲ್ ಗ್ಯಾಲರಿ ಕುಸಿತ -200ಕ್ಕೂ ಹೆಚ್ಚು ಮಂದಿಗೆ ಗಾಯ

ಕ್ರಿಶ್ಚಿಯನ್ ಪಾದ್ರಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ

ರಾಜ್ಯದಲ್ಲಿ ಇನ್ನೂ ಮುಂದುವರಿಯಲಿದೆ ಬೇಸಿಗೆ ಮಳೆ!

 

ಇತ್ತೀಚಿನ ಸುದ್ದಿ

Exit mobile version