ಕೇವಲ 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 32,438 ಉದ್ಯೋಗಾವಕಾಶ :  ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು - Mahanayaka
10:59 AM Saturday 22 - February 2025

ಕೇವಲ 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 32,438 ಉದ್ಯೋಗಾವಕಾಶ :  ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು

railway department
23/01/2025

Railway Department Group D Jobs 2025 — ರೈಲ್ವೆ ಇಲಾಖೆಯು, ಕೇಂದ್ರ ಸರ್ಕಾರ ಉದ್ಯೋಗದ ನಿರೀಕ್ಷೇಯಲ್ಲಿದ್ದ ಅಭ್ಯರ್ಥಿಗಳಿಗೆ ಗೂಡ್ ನ್ಯೂಸ್ ನೀಡಿದೆ. ಅದೇನೆಂದರೆ ದೇಶಾದ್ಯಂತ ಇರುವ 32,438 ಗ್ರೂಪ್ ಡಿ ವಿಭಾಗದ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿಯೂ ಕೂಡ 500 ಹುದ್ದೆಗಳು ಖಾಲಿ ಇವೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ..

ಕೇವಲ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು :

ಹೌದು, ಈ ಮೊದಲು ರೈಲ್ವೆ ಇಲಾಖೆಯ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಂಬಂಧಪಟ್ಟ ವಿಷಯದಲ್ಲಿ ಐಟಿಐ ಮುಗಿಸಿರುವುದು ಕಡ್ಡಾಯವಾಗಿತ್ತು. ಆದರೆ ಇದೀಗ ಕೇವಲ 10ನೇ ತರಗತಿ ಪಾಸಾದವರು ಕೂಡ ಈ ಬೃಹತ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ ಮಾನದಂಡ — ಕನಿಷ್ಠ 18 ವರ್ಷದಿಂದ 36 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

 ವಿಶೇಷವೇನೆಂದರೆ ಕನ್ನಡ ಭಾಷೆಯಲ್ಲಿಯೂ ಕೂಡ ಪರೀಕ್ಷೆ ಬರೆಯಬಹುದು..

ವೇತನ ಎಷ್ಟು ಸಿಗಲಿದೆ?

ಮೂಲ ವೇತನ (Basic Pay) 18,000ರೂ. ಇದ್ದು, ಎಲ್ಲಾ ಸೇರಿ ನಿಮ್ಮ ಕೈಗೆ 35,000ರೂ. ತನಕ ಸಿಗಲಿದೆ. 8ನೇ ವೇತನ ಆಯೋಗ ಜಾರಿಯಾಗುವದರಿಂದ ಇನ್ನೂ ಹೆಚ್ಚಾಗಲಿದೆ.

ಅರ್ಜಿ ಸಲ್ಲಿಸಲು ಲಾಸ್ಟ ಡೇಟ್– 22 ಫೆಬ್ರವರಿ 2025

ಅರ್ಜಿ ಸಲ್ಲಿಸಲಿಕ್ಕೆ ಲಿಂಕ್ — https://www.rrbbnc.gov.in/


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ