ಕಳಸದಲ್ಲಿ ಮಳೆ: ಹೆಮ್ಮಕ್ಕಿಯಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ

05/04/2025
ಚಿಕ್ಕಮಗಳೂರು: ಕಳಸ ತಾಲ್ಲೂಕಿನಾದ್ಯಂತ ಶನಿವಾರ ಸುರಿದ ಮಳೆಯಿಂದಾಗಿ ಇಡಕಣಿ ಗ್ರಾಮ ಪಂಚಾಯಿತಿ ಹೆಮ್ಮಕ್ಕಿ ಗ್ರಾಮದ ಎಳ್ಳುಕುಡಿಗೆ ಸುಂದರಿ ಎಂಬುವವರ ಮನೆಗೆ ಮರ ಬಿದ್ದು ಮನೆಗೆ ಹಾನಿಯಾಗಿದೆ.
ಹಳುವಳ್ಳಿ ಹೊರನಾಡು ಮಧ್ಯೆ ವಿದ್ಯುತ್ ತಂತಿ ಮೇಲೆ ಅಡಕೆ ಮರವೊಂದು ಬಿದ್ದು ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.
ಕಳಸ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಜೋರಾಗಿ ಮಳೆ ಸುರಿದಿದೆ. ಮಳೆ ಹಿನ್ನಲೆಯಲ್ಲಿ ಮಳೆಯಿಂದ ಕಳಸ ಪಟ್ಟಣದಲ್ಲಿ ಕೆಲ ಹೊತ್ತು ವಾಹನ ಸಂಚಾರವೂ ಸ್ಥಗಿತಗೊಂಡಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: