ತಿಂಡಿ‌ ಕೇಳಿದ್ರೆ ಡೋಂಟ್ ಕೇರ್: ಮೊಬೈಲ್ ಫೋನ್ ನಲ್ಲಿ ಆಟ ಆಡುತ್ತಿದ್ದ ಪತ್ನಿಯನ್ನು ಎರಡನೇ ಮಹಡಿಯಿಂದ ತಳ್ಳಿದ ಪತಿ! - Mahanayaka

ತಿಂಡಿ‌ ಕೇಳಿದ್ರೆ ಡೋಂಟ್ ಕೇರ್: ಮೊಬೈಲ್ ಫೋನ್ ನಲ್ಲಿ ಆಟ ಆಡುತ್ತಿದ್ದ ಪತ್ನಿಯನ್ನು ಎರಡನೇ ಮಹಡಿಯಿಂದ ತಳ್ಳಿದ ಪತಿ!

26/12/2024

ತನಗೆ ಆಹಾರ ನೀಡಲು ವಿಳಂಬ ಮಾಡಿದ್ದಕ್ಕಾಗಿ ಪತಿಯೊಬ್ಬ ತನ್ನ ಹೆಂಡತಿಯನ್ನು ಮನೆಯ ಎರಡನೇ ಮಹಡಿಯಿಂದ ತಳ್ಳಿದ ಘಟನೆ ಛತ್ತೀಸ್‌ಗಢದ ರಾಯ್ಪುರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Provided by

ಮಹಿಳೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ವಿಕಾಸ್ ನಗರದ ಸುನಿಲ್ ಜಗಬಂಧು ಎಂಬ ವ್ಯಕ್ತಿ ತನ್ನ ಪತ್ನಿ ಸಪ್ನಾ ಅವರಿಗೆ ಆಹಾರವನ್ನು ಬಡಿಸಲು ಕೇಳಿದ್ದಾನೆ. ಆದರೆ ಅವಳು ಪತಿಯ ಮಾತನ್ನು‌ ಲೆಕ್ಕಿಸದೇ ಮೊಬೈಲ್ ಫೋನ್ ನಲ್ಲೇ ಮುಳುಗಿದ್ದಳು. ಹೀಗಾಗಿ ಕೋಪ ಬಂದು ಪತಿ‌ ಪತ್ನಿ ನಡುವೆ ವಾಗ್ವಾದ ಪ್ರಾರಂಭವಾಗಿದೆ. ನಂತರ ಜಗಬಂಧು ತನ್ನ ಹೆಂಡತಿಯನ್ನು ಮನೆಯ ಎರಡನೇ ಮಹಡಿಯಿಂದ ತಳ್ಳಿದ್ದಾನೆ.

ಗುಡಿಯಾರಿ ಪೊಲೀಸರು ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಸಪ್ನಾ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ರಾಯ್ಪುರದ ಡಿಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ