ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅರೆಸ್ಟ್  | “ಅಕ್ರಮ ಬಂಧನ” - Mahanayaka
1:10 PM Thursday 12 - December 2024

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅರೆಸ್ಟ್  | “ಅಕ್ರಮ ಬಂಧನ”

kodihalli chandrashekhar
10/04/2021

ಬೆಳಗಾವಿ: ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದು, ಈ ಮೂಲಕ ಸಾರಿಗೆ ನೌಕರರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಸರ್ಕಾರ ಕೈ ಹಾಕಿದೆ ಎಂದು ಹೇಳಲಾಗಿದೆ.

 ಬೆಳಗಾವಿಯ ಸುವರ್ಣಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್​ ಸಭೆಗೆ ನಿರ್ಧರಿಸಿದ್ದರು. ಆದರೆ ಸಭೆಗೂ ಮುನ್ನವೇ ಖಾಸಗಿ ಹೋಟೆಲ್‌ನಲ್ಲಿದ್ದ ಕೋಡಿಹಳ್ಳಿ ಚಂದ್ರಶೇಖರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮನ್ನು ವಶಕ್ಕೆ ಪಡೆದಿರುವ ಸಂಬಂಧ ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೋಡಿ ಹಳ್ಳಿ ಚಂದ್ರಶೇಖ್ ಸರ್ಕಾರ ತಮ್ಮ ಹೋರಾಟವನ್ನು ಸರ್ಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮುಂಜಾಗ್ರತಾ ಕ್ರಮವಿದು ಎನ್ನುತ್ತಿದ್ದಾರೆ. ಸಕಾರಣ ಗೊತ್ತಿಲ್ಲ. ಇದು ತಪ್ಪು. ಚಳವಳಿ ಧಮನ ನೀತಿ ಇದಾಗಿದೆ. ಈ ಬಂಧನ‌ ಅಕ್ರವಾಗುತ್ತದೆ. ಧಮನವಾಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ