ರೈತರ ವಿರೋಧ ಕಟ್ಟಿಕೊಳ್ಳಬೇಡಿ: ಕೇಂದ್ರಕ್ಕೆ ಮೇಘಾಲಯ ರಾಜ್ಯಪಾಲ ಎಚ್ಚರಿಕೆ - Mahanayaka
9:47 AM Thursday 19 - September 2024

ರೈತರ ವಿರೋಧ ಕಟ್ಟಿಕೊಳ್ಳಬೇಡಿ: ಕೇಂದ್ರಕ್ಕೆ ಮೇಘಾಲಯ ರಾಜ್ಯಪಾಲ ಎಚ್ಚರಿಕೆ

satyapal-malik
12/03/2022

ಜೋಧಪುರ: ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಹಿಂಸಾಚಾರದ ಮೂಲಕ ತಮಗೆ ಬೇಕಾದ್ದನ್ನು ಪಡೆಯಲು ಪ್ರಯತ್ನಿಸುತ್ತಾರೆ ಎಂದು ಕೇಂದ್ರಕ್ಕೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಎಚ್ಚರಿಕೆ ನೀಡಿರುವ ಘಟನೆ ವರದಿಯಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರೈತರೊಂದಿಗೆ ಜಗಳವಾಡಬೇಡಿ, ಅವರು ಅಪಾಯಕಾರಿ ಜನರು. ಇದು ದೆಹಲಿಗೆ ನನ್ನ ಸಲಹೆಯಾಗಿದೆ. ರೈತರು ತಮಗೆ ಬೇಕಾದ್ದನ್ನು ತೆಗೆದುಕೊಳ್ಳುತ್ತಾರೆ. ಅದು ಮಾತುಕತೆಯ ಮೂಲಕ ಸಾಧ್ಯವಾಗದಿದ್ದರೆ, ಅದನ್ನು ಹೋರಾಟದ ಮೂಲಕ ತೆಗೆದುಕೊಳ್ಳುತ್ತಾರೆ. ಅದೂ ಸಾಧ್ಯವಾಗದಿದ್ದರೇ ಹಿಂಸಾಚಾರದ ಮೂಲಕ ಪಡೆದುಕೊಳ್ಳಬಹುದು ಎಂದು ಹೇಳಿದರು.

ರೈತರ ವಿರೋಧ ಕಟ್ಟಿಕೊಳ್ಳಬೇಡಿ. ಸಿಖ್ಖರು ಮತ್ತು ಜಾಟ್‌ಗಳು ಮರೆಯುವುದಿಲ್ಲ ಎಂದ ಅವರು, ರೈತರ ಬಗ್ಗೆ ಮಾತಾನಾಡಿರುವುದರಿಂದ ದೆಹಲಿಯಿಂದ ಯಾವಾಗ ಬೇಕಾದರೂ ಕರೆ ಬರುವ ಅವಕಾಶವಿದೆ. ರೈತರ ಸಮಸ್ಯೆಯನ್ನು ಎತ್ತುವುದಕ್ಕೆ ನನ್ನ ಹುದ್ದೆಯನ್ನು ಕಳೆದುಕೊಳ್ಳುವ ಭಯವಿಲ್ಲ.


Provided by

ಕೇಂದ್ರದೊಂದಿಗೆ ನನಗೆ ಯಾವುದೇ ದ್ವೇಷವಿಲ್ಲ. ಆದರೆ ರೈತರಿಗಾಗಿ ನನ್ನ ಹುದ್ದೆಯನ್ನು ಬಿಡುತ್ತೇನೆ ಎಂದು ರೈತರ ಆಂದೋಲನದ ನಿರ್ವಹಣೆಯ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅನುಮಾನಾಸ್ಪದ ರೀತಿಯಲ್ಲಿ ವಕೀಲೆ ಆತ್ಮಹತ್ಯೆ

ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ: 60 ಗುಡಿಸಲು ಭಸ್ಮ, 7 ಮಂದಿ ಸಾವು

ಭೀಕರ ರಸ್ತೆ ಅಪಘಾತ: ಕಾರು ಚಾಲಕ ಸೇರಿ ಐದು ಮಂದಿ ಸ್ಥಳದಲ್ಲೇ ಸಾವು

ತಾಯಿ, ಮಗನನ್ನು ಒಂದಾಗಿಸಿದ ಆಧಾರ್ ಕಾರ್ಡ್

ಯಡಿಯೂರಪ್ಪನವರನ್ನು ಕಿತ್ತು ಹಾಕಿದರು ಎಂದ ಸಿದ್ದರಾಮಯ್ಯ: ಎದ್ದು ನಿಂತು ಮಾತನಾಡಿದ ಬಿಎಸ್ ವೈ

 

ಇತ್ತೀಚಿನ ಸುದ್ದಿ