ರಾಜ್ ಕುಂದ್ರಾ ತಯಾರಿಸುತ್ತಿದ್ದ ನೀಲಿ ಚಿತ್ರ ಯಾವ ಆ್ಯಪ್ ನಲ್ಲಿ ಬಿಡುಗಡೆಯಾಗುತ್ತಿತ್ತು? | ಪೊಲೀಸರು ನೀಡಿದ ಆ ಮಾಹಿತಿ ಏನು? - Mahanayaka
8:01 PM Wednesday 11 - December 2024

ರಾಜ್ ಕುಂದ್ರಾ ತಯಾರಿಸುತ್ತಿದ್ದ ನೀಲಿ ಚಿತ್ರ ಯಾವ ಆ್ಯಪ್ ನಲ್ಲಿ ಬಿಡುಗಡೆಯಾಗುತ್ತಿತ್ತು? | ಪೊಲೀಸರು ನೀಡಿದ ಆ ಮಾಹಿತಿ ಏನು?

raj kundra
21/07/2021

ಮುಂಬೈ: ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಲಂಡನ್ ಮೂಲದ ಸಂಸ್ಥೆಯೊಂದಿಗೆ ಕೈ ಜೋಡಿಸುವ ಮೂಲಕ ಅಶ್ಲೀಲ ಚಿತ್ರಗಳ ತಯಾರಿಕೆ ನಡೆಸುತ್ತಿತ್ತು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ರಾಜ್ ಕುಂದ್ರಾ ಅವರ ವಿಯಾನ್ ಇಂಡಸ್ಟ್ರೀಸ್ ಲಂಡನ್ ಮೂಲದ ಕೆನ್ರಿಕ್ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಕೆನ್ರಿನ್ ಸಂಸ್ಥೆಯು ರಾಜ್ ಕುಂದ್ರಾ ಅವರ ಸೋದರ ಮಾವನ ಒಡೆತನದಲ್ಲಿದೆ ಎಂದು ಹೇಳಲಾಗಿದೆ.

ಕ್ರಿನಿಕ್ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ ರಾಜ್ ಕುಂದ್ರಾ ಅವರ ಕಂಪೆನಿ ಭಾರತೀಯ ವೀಕ್ಷಕರಿಗಾಗಿ ಅಶ್ಲೀಲ ಚಿತ್ರಗಳನ್ನು ತಯಾರಿಸುವಲ್ಲಿ ನಿರತವಾಗಿತ್ತು. ಈ ವಿಡಿಯೋಗಳನ್ನು ‘ಹಾಟ್ ಶಾಟ್’ ಎಂಬ ಆ್ಯಪ್ ಮೂಲಕ ಬಿಡುಗಡೆ ಮಾಡಲಾಗುತ್ತಿತ್ತು ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಶ್ಲೀಲ ಚಿತ್ರಗಳನ್ನು ತಯಾರಿಸಿ ಬಿಡುಗಡೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಾಜ್ ಕುಂದ್ರಾನನ್ನು ಸೋಮವಾರ ಅರೆಸ್ಟ್ ಮಾಡಿದ್ದರು. ಇದರ ಜೊತೆಗೆ ಇನ್ನೋರ್ವ ಆರೋಪಿ ರಿಯಾನ್ ಜಾನ್ ನನ್ನು ಕೂಡ ಬಂಧಿಸಿದ್ದಾರೆ. ಸದ್ಯ ಮುಂಬೈ ಸ್ಥಳೀಯ ನ್ಯಾಯಾಲಯ ಆರೋಪಿಯನ್ನು ಜುಲೈ 23ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಇನ್ನಷ್ಟು ಸುದ್ದಿಗಳು…

ಪತಿವ್ರತೆ ಎಂದು ಸಾಬೀತು ಪಡಿಸಲು ಮಹಿಳೆಯನ್ನು ಕುದಿಯುವ ಎಣ್ಣೆಗೆ ಕೈ ಹಾಕಿಸಿದರು!

ಶಿಲ್ಪಾ ಶೆಟ್ಟಿಯ ಗಂಡ ಹಣ ಮಾಡಿದ್ದು ಹೇಗೆ? | ರಾಜ್ ಕುಂದ್ರಾ ಬಂಧನದ ಬೆನ್ನಲ್ಲೇ ವಿಡಿಯೋ ವೈರಲ್

ಶಿಲ್ಪಾ ಶೆಟ್ಟಿ ಗಂಡ ಮಾಡುತ್ತಿದ್ದದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕಕಾರಿ ವಿಡಿಯೋ | ಮಾಡೆಲ್ ಹೇಳಿದ್ದೇನು?

ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಯತ್ನ

ಇತ್ತೀಚಿನ ಸುದ್ದಿ