ರಾಜ್ ಕುಮಾರ ಸಿನಿಮಾ ನೋಡ್ಲೇ ಬೇಕು ಮಾಮಾ ಅಂದಿದ್ರು ಪುನೀತ್ | ಸಿದ್ದರಾಮಯ್ಯ - Mahanayaka
3:14 AM Wednesday 11 - December 2024

ರಾಜ್ ಕುಮಾರ ಸಿನಿಮಾ ನೋಡ್ಲೇ ಬೇಕು ಮಾಮಾ ಅಂದಿದ್ರು ಪುನೀತ್ | ಸಿದ್ದರಾಮಯ್ಯ

siddaramaiha
13/12/2021

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರು ನನ್ನನ್ನು ಮಾಮ, ಮಾಮ ಅಂತ ಕರೆಯುತ್ತಿದ್ದರು. ನನಗೆ ಒಂದು ಬಾರಿ ಸಿಕ್ಕಿದ ವೇಳೆ ಅವರು, ರಾಜ್ ಕುಮಾರ ಸಿನಿಮಾವನ್ನು ನೀವು ನೋಡ್ಲೇ ಬೇಕು ಮಾಮ ಎಂದು ನನ್ನ ಬಳಿ ಹೇಳಿದ್ದರು ಎಂದರು.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡುತ್ತಾ, ಪುನೀತ್ ನನ್ನನ್ನು ಮಾಮಾ, ಮಾಮಾ ಅಂತ ಕರೆಯುತ್ತಿದ್ದರು. ಅಂದು ಕೂಡ ರಾಜ್ ಕುಮಾರ ಸಿನಿಮಾ ನೋಡಬೇಕು ಎಂದಾಗ ನಾನು ಹೋಗಿ ಸಿನಿಮಾ ನೋಡಿದೆ. ಮೈಸೂರಿನಲ್ಲಿ ಥಿಯೇಟರ್ ಗೆ ಹೋಗುತ್ತಿರಲಿಲ್ಲ ನಾನು. ಆದರೆ, ಆ ಸಿನಿಮಾವನ್ನು ಥಿಯೇಟರ್ ಗೆ ಹೋಗಿ ನೋಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಹಳ ಅದ್ಭುತ ನಟನೆ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಬೆಟ್ಟದ ಹೂವು ಚಿತ್ರಕ್ಕೆ ಅವರಿಗೆ ರಾಷ್ಟ್ರಪ್ರಶಸ್ತಿ ದೊರಕಿತ್ತು. ಎಲ್ಲದಕ್ಕೂ ಮುಖ್ಯವಾಗಿ ಪುನೀತ್ ರಾಜ್ ಕುಮಾರ್ ಅವರ ಸಾಮಾಜಿಕ ಕೆಲಸಗಳು ಮುಖ್ಯವಾಗುತ್ತದೆ. ಜನರ ಕಷ್ಟಗಳಿಗೆ ಸ್ಪಂದಿಸುವಂತಹ ಮನೋಭಾವ, ಅವರ ತಂದೆಯ ಎಲ್ಲ ಗುಣಗಳನ್ನು ಅಳವಡಿಸಿಕೊಂಡಿರುವಂತಹದ್ದು. ಪುನೀತ್ ರಾಜ್ ಕುಮಾರ್ ಅವರು ಅಪರೂಪದ ವ್ಯಕ್ತಿ ಎಂದು ಸಿದ್ದರಾಮಯ್ಯ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಖಿದ್ಮಾ ಫೌಂಡೇಶನ್ ಕರ್ನಾಟಕ ವತಿಯಿಂದ ರಾಜ್ಯ ಮಟ್ಟದ ಆನ್ ಲೈನ್ ಕವನ ಸ್ಪರ್ಧೆ

ಹಾಸ್ಟೆಲ್ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಭದ್ರತಾ ಸಿಬ್ಬಂದಿ ಅರೆಸ್ಟ್

ಸಮಸ್ಯೆ ಹೇಳಿಕೊಳ್ಳಲು ಬಂದವರಿಗೆ ಗದರಿದ ಮಾಜಿ ಸಿಎಂ ಸಿದ್ದರಾಮಯ್ಯ!| ಕಾರಣ ಏನು ಗೊತ್ತಾ?

ಹಾಸ್ಟೆಲ್ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಭದ್ರತಾ ಸಿಬ್ಬಂದಿ ಅರೆಸ್ಟ್

ಬಿಟ್ ಕಾಯಿನ್ ಹಗರಣದ ಸೂತ್ರಧಾರ ‘ಶ್ರೀಕೃಷ್ಣ’ ಕರ್ನಾಟಕದಿಂದ ಪರಾರಿ?

ನಾಡೋಜ ಕವಿ ದಿ.ಸಿದ್ಧಲಿಂಗಯ್ಯ ಅವರ ಸಹಧರ್ಮಿಣಿ ರಮಾದೇವಿಯವರು ಇಂದು ಕಾಸರಗೋಡಿಗೆ

ಇತ್ತೀಚಿನ ಸುದ್ದಿ