ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರು ವಾವರ್ ಮಸೀದಿಗೆ ಹೋಗಬಾರದಂತೆ: ದ್ವೇಷ ಕಾರಿದ ಬಿಜೆಪಿ ನಾಯಕ

22/11/2024

ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರು ವಾವರ್ ಮಸೀದಿಗೆ ಭೇಟಿ ನೀಡಬಾರದು ಎಂದು ತೆಲಂಗಾಣದ ಬಿಜೆಪಿ ನಾಯಕ ಮತ್ತು ದ್ವೇಷ ಪ್ರಚಾರಕ್ಕೆ ಕುಪ್ರಸಿದ್ಧಿಯನ್ನು ಹೊಂದಿರುವ ರಾಜ ಸಿಂಗ್ ಕರೆ ಕೊಟ್ಟಿದ್ದಾರೆ. ವಾವರ್ ದರ್ಗಾ ಮತ್ತು ಮಸೀದಿಗೆ ಅಯ್ಯಪ್ಪ ಭಕ್ತರು ಭೇಟಿ ನೀಡಬಾರದು. ಹಿಂದುಗಳು ಸಮಾಧಿಯ ಮುಂದೆ ನಿಲ್ಲುವುದನ್ನು ಮತ್ತು ಅದಕ್ಕೆ ಕೈ ಮುಗಿಯುವುದನ್ನು ಹಿಂದೂ ಧರ್ಮ ವಿರೋಧಿಸುತ್ತದೆ ಎಂದವರು ತಮ್ಮ ಕರೆಗೆ ಸಮರ್ಥನೆ ನೀಡಿದ್ದಾರೆ.

ಧರ್ಮ ದ್ವೇಷದ ಭಾಷಣಗಳಿಗೆ ಕುಪ್ರಸಿದ್ಧಿಯನ್ನು ಹೊಂದಿರುವ ಈ ರಾಜಸಿಂಗ್ ಅವರ ಹೇಳಿಕೆಯ ವಿರುದ್ಧ ಅಯ್ಯಪ್ಪ ಮೃತಧಾರಿಗಳು ಸಹಿತ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಅಯ್ಯಪ್ಪ ಸ್ವಾಮಿಯನ್ನು ಎಳೆದು ತರುವುದಕ್ಕೆ ಅನೇಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ವಾವರ್ ಮಸೀದಿಗೆ ಭೇಟಿ ನೀಡಿದರೆ ಮಾತ್ರವೇ ಶಬರಿಮಲೆಯ ಯಾತ್ರೆ ಪೂರ್ತಿಯಾಗುತ್ತದೆ ಎಂಬುದು ಅಯ್ಯಪ್ಪ ಭಕ್ತರ ನಂಬಿಕೆಯಾಗಿದೆ. ಶಬರಿಮಲೆಯ ಅಯ್ಯಪ್ಪ ದರ್ಶನಕ್ಕೆ ಬರುವ ಭಕ್ತರು ವಾವರ್ ಮಸೀದಿಗೆ ಭೇಟಿ ನೀಡುವುದು ದಶಕಗಳಿಂದ ನಡೆದು ಬಂದ ಸಂಪ್ರದಾಯವಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version