ರಾಜಕೀಯ ನಾಯಕರ ಭದ್ರತಾ ಬೆಂಗಾವಲು ಹಿಂಪಡೆದ ಪಂಜಾಬ್ ಸರ್ಕಾರ - Mahanayaka

ರಾಜಕೀಯ ನಾಯಕರ ಭದ್ರತಾ ಬೆಂಗಾವಲು ಹಿಂಪಡೆದ ಪಂಜಾಬ್ ಸರ್ಕಾರ

panjab
28/05/2022

ರಾಜಕೀಯ ನಾಯಕರು ಸೇರಿದಂತೆ 424 ಜನರ ಭದ್ರತಾ ಬೆಂಗಾವಲು ಪಂಜಾಬ್ ಸರ್ಕಾರ ಹಿಂಪಡೆದಿದೆ.  ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಮತ್ತು ನಿವೃತ್ತ ಪೊಲೀಸ್ ಅಧಿಕಾರಿಯ ಭದ್ರತಾ ಬೆಂಗಾವಲು ಹಿಂಪಡೆಯಲಾಗಿದೆ.

ಭದ್ರತೆಯ ಉಸ್ತುವಾರಿ ಹೊತ್ತಿರುವ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಹಿಂತಿರುಗುವಂತೆ, ರಾಜ್ಯ ಸಶಸ್ತ್ರ ಪಡೆಗಳ ವಿಶೇಷ ಡಿಜಿಪಿಗೆ ರಿಪೋರ್ಟ್ ನೀಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

ಈ ಹಿಂದೆ ಪಂಜಾಬ್ ಸರ್ಕಾರ ಮಾಜಿ ಸಚಿವರು ಸೇರಿದಂತೆ 184 ಮಂದಿಯ ಭದ್ರತೆಯನ್ನು ಹಿಂಪಡೆದಿತ್ತು.  ಅಕಾಲಿದಳದ ಸಂಸದೆ ಹರಸಿಮ್ರತ್ ಕೌರ್ ಬಾದಲ್ ಮತ್ತು ಪಂಜಾಬ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಸುನಿಲ್ ಝಾಖರ್ ಭದ್ರತೆಯನ್ನೂ ಹಿಂಪಡೆಯಲಾಗಿದೆ. ಈ ಪೈಕಿ ಐವರಿಗೆ ಇಝಡ್ ಕೆಟಗರಿ ಭದ್ರತೆ ಹಾಗೂ ಇತರ ಮೂವರಿಗೆ ವೈ ಪ್ಲಸ್ ಭದ್ರತೆ ಇತ್ತು. ಇವರಿಗೆ ಒಟ್ಟು 127 ಪೊಲೀಸರು ಮತ್ತು ಒಂಬತ್ತು ವಾಹನಗಳು ಭದ್ರತಾ ಬೆಂಗಾವಲಾಗಿದ್ದವು.

ರಾಜ್ಯದಲ್ಲಿ ವಿಐಪಿಗಳ ಭದ್ರತೆಯನ್ನು ಪಂಜಾಬ್ ಸರ್ಕಾರ ಹಿಂಪಡೆದಿರುವುದು ಇದು ಮೂರನೇ ಬಾರಿ.  ಮೊದಲ ಎರಡು ಆದೇಶಗಳಲ್ಲಿ ಮಾಜಿ ಶಾಸಕರು, ಸಂಸದರು, ಸಚಿವರು ಸೇರಿದಂತೆ 184 ಮಂದಿಯ ಭದ್ರತೆಯನ್ನು ಹಿಂಪಡೆಯಲಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

100 ವರ್ಷಗಳಷ್ಟು ಹಳೆಯ ಮಸೀದಿಗಳ ರಹಸ್ಯ ಸಮೀಕ್ಷೆಗೆ  ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ

ವಿದ್ಯಾರ್ಥಿ ಮೇಲೆ ಕಾಡು ಹಂದಿ ದಾಳಿ

ಒಂದೆಲಗ ಸೇವನೆಯಿಂದ ಪಡೆಯಿರಿ ಈ ಅದ್ಭುತ ಪ್ರಯೋಜನಗಳು

ಬಾವಿ ಕಾಣೆಯಾಗಿದೆ ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು!

ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಕೊಲೆ: ಕಠಿಣ ಶಿಕ್ಷೆ ಕೊಡಿಸುತ್ತೇವೆ: ಸಚಿವ ಮುರುಗೇಶ್ ನಿರಾಣಿ

 

ಇತ್ತೀಚಿನ ಸುದ್ದಿ