ರಾಜಕೀಯಕ್ಕಾಗಿ ಬಿಲ್ಲವ ಸಮುದಾಯವನ್ನು ದುರ್ಬಳಕೆ ಮಾಡಲಾಗುತ್ತಿದೆ: ಶ್ರೀ ಪ್ರಣವಾನಂದ ಸ್ವಾಮೀಜಿ ಕಿಡಿ
ಮಂಗಳೂರು: ರಾಜಕೀಯ ಲಾಭಕ್ಕಾಗಿ ಬಿಲ್ಲವ(ಈಡಿಗ) ಸಮುದಾಯದವರನ್ನು ದುರ್ಬಳಕೆ ಮಾಡಲಾಗ್ತಿದೆ. ದೇಶ ಧರ್ಮಕ್ಕಾಗಿ ಬಿಲ್ಲವ ಸಮುದಾಯ ಅವರು ತಮ್ಮ ಜೀವವನ್ನ ಬಲಿ ಕೊಟ್ಟಿದ್ದಾರೆ. ಇಷ್ಟೆಲ್ಲ ನಡೆದರೂ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮೌನಿಯಾಗಿ ಕೂತಿದ್ದಾರೆ ಎಂದು ಕಲ್ಬುರ್ಗಿ ಜಿಲ್ಲೆ ಚಿತ್ತಾಪುರ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ಸ್ವತಂತ್ರ ಭಾರತದಲ್ಲಿ ನಾವೀಗ ಅತಂತ್ರವಾಗಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕೂಡಲೇ ಅಂತ್ಯ ಹಾಡಬೇಕು. ಇಲ್ಲದಿದ್ರೆ ನಾವು ಕುದ್ರೋಳಿಯಿಂದ ವಿಧಾನಸಭೆಗೆ, ಅಥವಾ ಶಕ್ತಿ ಪೀಠದಿಂದ ಬೆಂಗಳೂರಿಗೋ ಅಥವಾ ಗೆಜ್ಜೆಗಿರಿಯಿಂದ ಪಾದಯಾತ್ರೆ ಮಾಡುವುದೋ ಇವನ್ನ ಕೂಡಲೇ 15 ದಿನಗಳಲ್ಲಿ ನಾವು ತೀರ್ಮಾನ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದರು.
ಸಮುದಾಯವನ್ನ ದಾರಿ ತಪ್ಪಿಸುವ ಕೆಲಸವನ್ನು ಸುನಿಲ್ ಕುಮಾರ್ ಮಾಡಬಾರದು. ರಾಜಕೀಯ ಲಾಭಕ್ಕಾಗಿ ಯಾರು ಸಮುದಾಯವವನ್ನು ದುರ್ಬಳಕೆ ಮಾಡಿದ್ದಾರೋ ಅಂತಹವರಿಗೆ ಬುದ್ದಿ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka