ರಾಜಣ್ಣ, ವಿಷ್ಣು ಎತ್ತರಕ್ಕೆ ದರ್ಶನ್ ಬೆಳೆದಿದ್ದರು: ಹಾಸ್ಯ ನಟ ಟೆನ್ನಿಸ್ ಕೃಷ್ಣ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಬಗ್ಗೆ ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ ಮಾತನಾಡಿದ್ದು, ದರ್ಶನ್ ಜೊತೆಗಿನ ಹಲವು ಒಡನಾಟಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ದರ್ಶನ್ ಹಿರಿಯ ಕಲಾವಿದರಿಗೆ ಗೌರವ ಕೊಡುತ್ತಿದ್ದರು. ಅವರಿಗೆ ಸಾಕಷ್ಟು ಅವಮಾನಗಳಾಗಿತ್ತು ಎಂದು ಅವರು ಹೇಳಿದ್ದರು. ಆಗ ನಾನು ಅವರಿಗೆ ಅವಮಾನ ಮಾಡಿದವರು ಒಂದು ದಿನ ನಿಮ್ಮ ಮುಂದೆ ಕೈಕಟ್ಟಿ ನಿಲ್ಲುವ ಸಮಯ ಬರುತ್ತದೆ ಎಂದು ಹೇಳಿದ್ದೆ ಎಂದು ಹೇಳಿದರು.
ಸ್ಟಾರ್ ಗಿರಿ ಬಂದ ಮೇಲೂ ದರ್ಶನ್ ಬದಲಾಗಲಿಲ್ಲ. ಈ ಕೇಸ್ ನಲ್ಲಿ ಯಾಕಾಯ್ತು ಏನಾಯ್ತು ನನ್ಗೆ ಗೊತ್ತಿಲ್ಲ. ದರ್ಶನ್ ಬಹಳಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ. ವಿಷ್ಣು ಸರ್, ರಾಜಣ್ಣ ನೆನಿಸ್ಕೊತೀನಿ. ಅವ್ರಿಬ್ಬರು ಚಿತ್ರರಂಗಕ್ಕೆ ಎರಡು ಕಣ್ಣು ಇದ್ದಂಗೆ. ದರ್ಶನ್ ಆ ಇಬ್ಬರು ನಟರ ಮಟ್ಟಕ್ಕೆ ಬೆಳೆದಿದ್ರು. ದರ್ಶನ್ ಜೊತೆ ಬುಲ್ ಬುಲ್ ಸಿನಿಮಾದಲ್ಲಿ ಒಳ್ಳೆ ಪಾತ್ರ ಮಾಡಿದೆ. ದರ್ಶನ್ ಜೊತೆ ಮತ್ತೆ ಸಿನಿಮಾ ಮಾಡುವ ಟೈಂ ಬರಲಿಲ್ಲ ಎಂದು ಕೃಷ್ಣ ಹೇಳಿದರು.
ಬಂಡವಾಳ ಹೂಡಿದ ನಿರ್ಮಾಪಕರು ಉಳಿಬೇಕು. ಕಾನೂನು ವ್ಯವಸ್ಥೆಯಲ್ಲಿ ಏನಾಗುತ್ತೆ ಆಗ್ಲಿ. ಅವರು ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ತಪ್ಪು ಮಾಡಿಲ್ಲ ಅಂದ್ರೆ ಆಚೆ ಬಂದು ದರ್ಶನ್ ಸಿನಿಮಾ ಮಾಡಲಿ ಎಂದು ಅವರು ಆಶಿಸಿದರು.
ದರ್ಶನ್ ಜೊತೆ ಇದ್ದವರು ಒಳ್ಳೆಯವರಲ್ಲ ಅದು ದರ್ಶನ್ ಗೂ ಗೊತ್ತಿರಲಿಲ್. ಪರಪ್ಪನ ಅಗ್ರಹಾರಕ್ಕೆ ಜೈಲಿಗೆ ಮೀಟ್ ಮಾಡಲು ಹೋಗಿ ವಾಪಾಸ್ ಬಂದಿದ್ದೀನಿ. ದರ್ಶನ್ ಒಳ್ಳೆಯವರು ಅವರ ಬಗ್ಗೆ ಮಾತಾಡುವಾಗ ಮಾತೇ ಬರುವುದಿಲ್ಲ ಎಂದು ಟೆನ್ನಿಸ್ ಕೃಷ್ಣ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: