ಗೋಧ್ರಾ ಘಟನೆಯ ಕುರಿತಾದ ಪಠ್ಯಪುಸ್ತಕಗಳನ್ನು ಹಿಂಪಡೆದ ರಾಜಸ್ಥಾನ ಸರ್ಕಾರ
ರಾಜಸ್ಥಾನ ಸರ್ಕಾರವು 2002ರ ಗೋಧ್ರಾ ರೈಲು ಸುಡುವ ಘಟನೆಯ ಅಧ್ಯಾಯಗಳನ್ನು ಒಳಗೊಂಡಿದ್ದ ಕೆಲವು ಶಾಲಾ ಪಠ್ಯಪುಸ್ತಕಗಳನ್ನು ಹಿಂಪಡೆದಿದೆ. ಮತ್ತು ಈ ವಿಷಯವನ್ನು ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲಿ ಕಲಿಸಲಾಗುವುದಿಲ್ಲ ಎಂದು ಹೇಳಿದೆ.
ಗೋದ್ರಾ ಘಟನೆಯಲ್ಲಿ ಹಂತಕರನ್ನು ಈ ಪಠ್ಯದಲ್ಲಿ ವೈಭವೀಕರಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ಮದನ್ ದಿಲಾವರ್ ಹೇಳಿದ್ದಾರೆ. ಹಿಂದಿನ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಘಟನೆಯ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ಮಕ್ಕಳನ್ನು ದಾರಿ ತಪ್ಪಿಸಿದೆ ಎಂದು ಆರೋಪಿಸಿದ್ದಾರೆ.
“ಗೋಧ್ರಾ ಘಟನೆಯ ಬಗ್ಗೆ ಸುಳ್ಳುಗಳನ್ನು ಹರಡಲಾಗುತ್ತಿದೆ ಮತ್ತು ಸಮಾಜವನ್ನು ವಿಭಜಿಸಲಾಗುತ್ತಿದೆ. ಗೋಧ್ರಾದಲ್ಲಿ ರೈಲು ಸುಟ್ಟುಹಾಕಿದವರನ್ನು ಹಿಂದೂಗಳೆಂದು ವೈಭವೀಕರಿಸಲಾಗುತ್ತಿದೆ ಮತ್ತು ಅವರನ್ನು ಅಪರಾಧಿಗಳು ಎಂದು ಕರೆಯಲಾಗುತ್ತಿದೆ. ಅಂದಿನ ಗುಜರಾತ್ ಸರ್ಕಾರದ ಬಗ್ಗೆ ತಪ್ಪು ವಿಷಯಗಳನ್ನು ಉಲ್ಲೇಖಿಸಲಾಗಿದೆ “ಎಂದು ಅವರು ಹೇಳಿದರು.
ಮಾಜಿ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ಡೋಟಾಸ್ರಾ ಈ ಪುಸ್ತಕಗಳ ಮೂಲಕ ಉದ್ದೇಶಪೂರ್ವಕವಾಗಿ ಮಕ್ಕಳನ್ನು ದಾರಿ ತಪ್ಪಿಸಲು ಸಂಚು ರೂಪಿಸಿದ್ದಾರೆ ಎಂದು ದಿಲಾವರ್ ಆರೋಪಿಸಿದ್ದಾರೆ.
‘ಜೀವನ್ ಕಿ ಬಹಾರ್’, ‘ಚಿಟ್ಟಿ ಏಕ್ ಕುತ್ತಾ ಔರ್ ಉಸ್ಕಾ ಜಂಗಲ್ ಫಾರ್ಮ್’ ಮತ್ತು ‘ಆದ್ರಶ್ಯ ಲಾಗ್-ಸ್ಟೋರಿ ಆಫ್ ಹೋಪ್ ಅಂಡ್ ಕರೇಜ್’ ಪಠ್ಯಗಳನ್ನು ತೆಗೆಯಲಾಗಿದೆ. ಇವುಗಳನ್ನು 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಸಲು ಬಳಸಲಾಗುತ್ತಿತ್ತು. ಸರ್ಕಾರಿ ಶಾಲೆಗಳಿಂದ ಎಲ್ಲಾ ಪ್ರತಿಗಳನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರವು ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಸೂಚಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj