ಬಿಗ್ ಬ್ರೇಕಿಂಗ್ ನ್ಯೂಸ್: ರಾಜೀನಾಮೆ ಬಗ್ಗೆ  ಸಿಎಂ ಯಡಿಯೂರಪ್ಪರಿಂದ ಮಹತ್ವದ ಹೇಳಿಕೆ - Mahanayaka
1:15 AM Wednesday 11 - December 2024

ಬಿಗ್ ಬ್ರೇಕಿಂಗ್ ನ್ಯೂಸ್: ರಾಜೀನಾಮೆ ಬಗ್ಗೆ  ಸಿಎಂ ಯಡಿಯೂರಪ್ಪರಿಂದ ಮಹತ್ವದ ಹೇಳಿಕೆ

yediyurappa
22/07/2021

ಬೆಂಗಳೂರು: ಅಂತೂ ಮುಖ್ಯಮಂತ್ರಿ ಯಡಿಯೂರಪ್ಪನವರು ಸಿಎಂ ಕುರ್ಚಿಯಿಂದ ಇಳಿಯುವುದು ಬಹುತೇಕ ಖಚಿತವಾಗಿದ್ದು,  ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಸ್ವತಃ ಯಡಿಯೂರಪ್ಪನವರೇ ಸುಳಿವು  ನೀಡಿದ್ದಾರೆ.

ಹೈಕಮಾಂಡ್ ಸೂಚನೆಯಂತೆ ನಾನು ನಡೆದುಕೊಳ್ಳುತ್ತೇನೆ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಡ್ಡಾ ಅವರಿಗೆ ನನ್ನ ಮೇಲೆ ವಿಶೇಷವಾದ ಪ್ರೀತಿ ಇದೆ. ರಾಜ್ಯದಲ್ಲಿ ಪಕ್ಷವನ್ನು ಬೆಳೆಸುವುದು ಮತ್ತು ಅಧಿಕಾರಕ್ಕೆ ತರುವುದು ನನ್ನ ಉದ್ದೇಶವಾಗಿದೆ ಎಂದು ಯಡಿಯೂರಪ್ಪನವರು ಹೇಳಿದ್ದಾರೆ.

ಪಕ್ಷದ ಆಂತರಿಕ ನಿಯಮಗಳ ಪ್ರಕಾರ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ನೀಡುವುದಿಲ್ಲ. ಆದರೆ, ನನ್ನ ಮೇಲೆ ನಂಬಿಕೆ ಹಾಗೂ ಪ್ರೀತಿ ಇಟ್ಟು 78 ವರ್ಷದವರೆಗೂ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಇನ್ನೂ ಹೈಕಮಾಂಡ್ ಸೂಚನೆಯಂತೆ ನಾನು ನಡೆದುಕೊಳ್ಳುತ್ತೇನೆ ಜುಲೈ 25ರಂದು ಹೈಕಮಾಂಡ್ ನಿಂದ ಸಂದೇಶ ಬರಲಿದೆ. ಜುಲೈ 26ರಿಂದ ನನ್ನ ಕೆಲಸವನ್ನು ನಾನು ಮಾಡುತ್ತೇನೆ. ನನ್ನ ಪರವಾಗಿ ಯಾರೂ ಪ್ರತಿಭಟನೆ ಮಾಡಬೇಡಿ. ಜುಲೈ 26ರಂದು ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ವಾಗುತ್ತದೆ. ಅಂದು ಎರಡು ವರ್ಷ ಸಾಧನೆಯ ವಿಶೇಷ ಕಾರ್ಯಕ್ರಮವಿದೆ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಸಂಕಲ್ಪ. ಮಠಾಧೀಶರು ನನಗೆ ಬೆಂಬಲ ನೀಡಿ ಆಶೀರ್ವಾದಿಸಿದ್ದಾರೆ. ಅವರಿಗೆ ನಾನು ಋಣಿ ಎಂದು ಯಡಿಯೂರಪ್ಪನವರು ಅಧಿಕಾರದಿಂದ ಕೆಳಗಿಳಿಯುವ ಸುಳಿವು ನೀಡಿದ್ದಾರೆ.

ಇನ್ನಷ್ಟು ಸುದ್ದಿಗಳು…

ಪ್ರೇಯಸಿ ಕೊವಿಡ್ ಗೆ ಬಲಿಯಾದ ಸುದ್ದಿ ತಿಳಿದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪ್ರಿಯಕರ

ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಸ್ವಾಮೀಜಿಗಳಿಗೆ ಕವರ್ ಹಂಚಿಕೆ | ಈ ಕವರ್ ನಲ್ಲಿ ಏನಿದೆ?

ಸಿದ್ದಲಿಂಗ ಶ್ರೀಗಳು ನಡೆದಾಡುವ ದೇವರಾಗಬೇಕು, ನಡೆದಾಡುವ ರಾಜಕಾರಣಿಯಾಗಬಾರದು | ಹೆಚ್.ವಿಶ್ವನಾಥ್

ಆಸ್ಕರ್ ಫರ್ನಾಂಡಿಸ್ ಆರೋಗ್ಯ ಸ್ಥಿತಿ ನೆನೆದು ಗಳಗಳನೇ ಅತ್ತ ಜನಾರ್ದನ ಪೂಜಾರಿ

ವಿಡಿಯೋದಲ್ಲಿ ಬೆತ್ತಲಾಗಲು ರಾಜ್ ಕುಂದ್ರಾ  ಹೇಳಿದ್ದರು ಎಂದ ಯೂಟ್ಯೂಬ್ ಸ್ಟಾರ್ | ಶಿಲ್ಪಾ ಶೆಟ್ಟಿ ಪತಿಯ ಮತ್ತೊಂದು ಕರ್ಮಕಾಂಡ ಬಯಲು

ಇತ್ತೀಚಿನ ಸುದ್ದಿ