ಹಾಸನದ 'ರಾಜೀವ್ ಆಸ್ಪತ್ರೆ'ಯಲ್ಲಿ ಮಾರ್ಚ್ 25ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ - Mahanayaka

ಹಾಸನದ ‘ರಾಜೀವ್ ಆಸ್ಪತ್ರೆ’ಯಲ್ಲಿ ಮಾರ್ಚ್ 25ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

rajeev hospital hassan
23/03/2022

ಹಾಸನ: ಹಾಸನದ ಹೆಸರಾಂತ ವೈದ್ಯರಾದ ದಿ.ರಾಜೀವ್ ಅವರು ಸ್ಥಾಪಿಸಿರುವ ರಾಜೀವ್ ಆಸ್ಪತ್ರೆ ಈಗಲೂ ತನ್ನ ಸಮಾಜ ಸೇವೆಯನ್ನು ಮುಂದುವರಿಸಿದ್ದು, ಮಾರ್ಚ್ 25ರಂದು ಆಸ್ಪತ್ರೆಯು, ವಾಸವಿ ಕ್ಲಬ್ ಮತ್ತು ಅಂಗಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕೊಣನೂರಿನಲ್ಲಿ ಹಮ್ಮಿಕೊಂಡಿದೆ.

ಮಾರ್ಚ್ 25ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ  ಉಚಿತ ಆರೋಗ್ಯ ತಪಾಸಣೆ ನಡೆಯಲಿದ್ದು, ಶಿಬಿರದಲ್ಲಿ ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಮತ್ತು ಇನ್ನಿತರ ವೈದ್ಯಕೀಯ ತಪಾಸಣೆ ನಡೆಸಿ, ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುವುದು.

ಈ ಶಿಬಿರದಲ್ಲಿ ನವಜಾತ ಶಿಶು ಮತ್ತು ಮಕ್ಕಳ ತಜ್ಞ ಡಾ.ರಂಜಿತ್ ರಾಜೀವ್, ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಹರ್ಷಿತಾ ಎಸ್., ಶಸ್ತ್ರ ಚಿಕಿತ್ಸಾ-ಮೂತ್ರಶಾಸ್ತ್ರಜ್ಞ ಡಾ.ಕಿರಣ್ ಬಿ.ಎಸ್., ಕೀಲು ಮತ್ತು ಮೂಳೆ ತಜ್ಞರಾದ ಡಾ. ಪ್ರಶಾಂತ್ ಕುಮಾರ್ ಜಿ.ಎ. ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆರ್ಯ ವೈಶ್ಯ ಮಂಡಳಿ ಕೊಣನೂರು ಇದರ ಅಧ್ಯಕ್ಷರಾದ ಕೆ.ಅಮರನಾಥ್, ವಾಸವಿ ಕ್ಲಬ್ ಕೊಣನೂರು ಚಾರ್ಟೆರ್ಡ್ ಪ್ರೆಸಿಡೆಂಟ್ ಬಿ.ಸಿ.ಮಂಜುನಾಥ್ ಭಾಗವಹಿಸಲಿದ್ದಾರೆ.




ಡಾ.ಹರ್ಷಿತಾ:

ಗರ್ಭಿಣಿ ಮತ್ತು ಹೆರಿಗೆ ಆರೋಗ್ಯ, ಮುಟ್ಟಿನ ಸಮಸ್ಯೆಗಳು, ಬಂಜೆತನದ ಚಿಕಿತ್ಸೆ, ಗರ್ಭನಿರೋಧಕ ಸಲಹೆ ಮತ್ತು ಶಸ್ತ್ರ ಚಿಕಿತ್ಸೆ, ಹದಿಹರೆಯದವರ ಆರೋಗ್ಯ, ಋತುಬಂಧ ಆರೋಗ್ಯ ತಪಾಸಣೆ, ಗರ್ಭಕೋಶ ಕ್ಯಾನ್ಸರ್ ತಪಾಸಣೆ, ಲ್ಯಾಪ್ರೊಸ್ಕೋಪಿ ಚಿಕಿತ್ಸೆ ಮೊದಲಾದ ಸಮಸ್ಯೆಗಳ ತಪಾಸಣೆಗಾಗಿ ಸಾರ್ವಜನಿಕರು ಡಾ.ಹರ್ಷಿತಾ ಅವರನ್ನು ಸಂಪರ್ಕಿಸಬಹುದಾಗಿದೆ.

ಡಾ.ಕಿರಣ್ ಬಿ.ಎಸ್.:

ಮೂತ್ರದ ಉರಿತ ಮತ್ತು ನೋವು ಬರುವುದು, ಹನಿಹನಿಯಾಗಿ ಮೂತ್ರ ವಿಸರ್ಜಿಸುವುದು ಹಾಗೂ ಮೂತ್ರ ವಿಸರ್ಜನೆಗೆ ತಡೆ, ಮೂತ್ರದ ಸೋಂಕು, ಮೂತ್ರದಲ್ಲಿ ರಕ್ತಬರುವುದು, ಹೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ಪ್ಲಾಸ್ಟೇಟ್ ಕಾಯಿಲೆಗಳಿಂದ ಉಂಟಾದ ತೊಂದರೆಗಳು, ಜನನಾಂಗ ಹಾಗೂ ಬೀಜಕ್ಕೆ ಸಂಬಂಧಪಟ್ಟ ತೊಂದರೆ, ಲೈಂಗಿಕ ಸಮಸ್ಯೆಗಳು, ಪುರುಷ ಬಂಜೆತನ, ಕಿಡ್ನಿ ಕಲ್ಲು ಸಂಬಂಧಪಟ್ಟ ಹೊಟ್ಟೆ ನೋವು, ಸೊಂಟದಲ್ಲಿ ನೋವು ಮತ್ತು ನಿಶಕ್ತಿ ಅನುಭವವಾಗುವುದು, ಕಿಡ್ನಿ ವೈಫಲ್ಯತೆ, ಕಿಡ್ನಿ ಮೂತ್ರಕೋಶ ಹಾಗೂ ಜನನಾಂಗಕ್ಕೆ ಸಂಬಂಧಪಟ್ಟ ಕ್ಯಾನ್ಸರ್ ಕಾಯಿಲೆ ಮೊದಲಾದ ಸಮಸ್ಯೆಗಳಿಗೆ ಡಾ.ಕಿರಣ್ ಬಿ.ಎಸ್.ಅವರನ್ನು ಸಂಪರ್ಕಿಸಬಹುದು.

ಡಾ.ಪ್ರಶಾಂತ್ ಕುಮಾರ್ ಜಿ.ಎ.:

ಮಂಡಿನೋವು, ಸಂದಿವಾತ, ಮೂಳೆ ಸವೆತ, ಬೆನ್ನು ನೋವು, ಸೋಂಟ ನೋವು, ಸ್ನಾಯು ಎಳೆತ ಮತ್ತು ನೋವು, ಮೂಳೆ ಮುರಿತ, ಸಂಧಿವಾತ ಮತ್ತು ಗೌಟ್, ಆರ್ಥೋಸ್ಕೋಫಿ, ಆರ್ಥೋಪ್ಲಾಸ್ಟಿ(ಕೀಲು ಜೋಡಣೆ) ಸಮಸ್ಯೆಗಳಿಗೆ ಡಾ.ಪ್ರಶಾಂತ್ ಕುಮಾರ್ ಜಿ.ಎ. ಅವರನ್ನು ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಚಿನ್ ಸರಗೂರು ಅವರ 9148104608 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಡಾ.ರಾಜೀವ್ ಅವರ ಕುರಿತು:

ವೃತ್ತಿಯನ್ನು ದೇವರು ಎಂದೇ ಭಾವಿಸಿದ ಡಾ.ರಾಜೀವ್ ಅವರು, ದಿನದ 24 ಗಂಟೆಗಳಲ್ಲಿ 14ರಿಂದ 16 ಗಂಟೆಗಳನ್ನು ಸಾರ್ವಜನಿಕ ಸೇವೆಗೆ ಮುಡಿಪಾಗಿಟ್ಟಿದ್ದರು. ದಿನಕ್ಕೆ 300ರಿಂದ 400 ಮಕ್ಕಳಿಗೆ ನಗುಮುಖದಿಂದಲೇ ಚಿಕಿತ್ಸೆ ನೀಡುತ್ತಿದ್ದರು. ಬಡ ಮಕ್ಕಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು. ಚಿಕಿತ್ಸೆಗೆ ಬಂದು ಮನೆಗೆ ಹೋಗಲು ಬಸ್ಸಿಗೆ ಹಣವಿಲ್ಲದೇ ಪರದಾಡುತ್ತಿದ್ದವರನ್ನು ಕರೆದು ಬಸ್ಸಿಗೆ ಹಣ ನೀಡಿ ಕಳುಹಿಸುತ್ತಿದ್ದ ಹೃದಯವಂತರೂ ಆಗಿದ್ದರು.

ಇನ್ನೂ ಆಸ್ಪತ್ರೆಯ ಸಿಬ್ಬಂದಿಯ ಜೊತೆಗೂ ಬಹಳ ಆತ್ಮೀಯವಾಗಿದ್ದರು. ಸಿಬ್ಬಂದಿಯನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ವೈದ್ಯಕೀಯ ಕ್ಷೇತ್ರವನ್ನು ತಾಯಿಯಂತೆ ಪ್ರೀತಿಸಿದ್ದ ರಾಜೀವ್ ಅವರು ನಿಧನರಾದ ನೋವನ್ನು ಇಲ್ಲಿನ ಸಿಬ್ಬಂದಿ ಇನ್ನೂ ಮರೆತಿಲ್ಲ ಎಂದು ಸಚಿನ್ ಸರಗೂರು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ