ರಾಜೀವ್ ಹಂತಕ ಜಾಮೀನಿನಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಮದುವೆಗೆ ಸಿದ್ಧತೆ!
ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಲ್ಲಿ ಒಬ್ಬನಾದ ಎ.ಜಿ.ಪೆರಾರಿವಾಳನ್ ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಪೆರಾರಿವಾಳನ್ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಆತನ ತಾಯಿ ಆತನಿಗೆ ಮುದವೆ ನಡೆಸಲು ಸಿದ್ಧತೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಜೈಲು ಮನೆ ಇಷ್ಟೇ ಜೀವನವಾಗಿದ್ದ ಕಾಲದಲ್ಲಿ ಎ.ಜಿ.ಪೆರಾರಿವಾಳನ್ ತನಗೆ ಮದುವೆ ಬೇಡ ಎಂದು ಹೇಳಿದ್ದನಂತೆ. ಆದರೆ ಇದೀಗ ಪರಿಸ್ಥಿತಿ ಬದಲಾಗುತ್ತಿರುವುದರಿಂದ ಆತ ಮದುವೆಗೆ ಒಪ್ಪಿಕೊಂಡಿರುವುದಾಗಿ ಆತನ ತಾಯಿ ಅರ್ಪುತಮ್ಮಾಳ್ ಹೇಳಿದ್ದಾರೆನ್ನಲಾಗಿದೆ.
ಪರಾರಿವಾಳನ್ 30 ವರ್ಷಗಳಿಂದ ಜೈಲಿನಲ್ಲಿದ್ದು, ಆತನನ್ನು ಬಿಡುಗಡೆ ಮಾಡಬೇಕು ಎಂದು ಆತನ ತಾಯಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ರನ್ನು ಭೇಟಿಯಾಗಿದ್ದರು. ತನ್ನ ಪುತ್ರನಿಗೆ ಬ್ಲಾಡರ್ ಸೋಂಕಿರುವ ಕಾರಣ ಆತನ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಡಲು ಅರ್ಪುತಮ್ಮಾಳನ್ ಕೇಳಿಕೊಂಡಿದ್ದರು. ಆಕೆಯ ಮನವಿಯನ್ನು ಪೂರೈಸಿದ ತಮಿಳುನಾಡು ಸರ್ಕಾರ ಪೆರಾರಿವಾಳನ್ ಗೆ 30 ದಿನಗಳ ಪೆರೋಲ್ ಕೊಟ್ಟಿದ್ದಲ್ಲದೇ ಅದನ್ನು ಇನ್ನೂ 30 ದಿನಗಳ ಮಟ್ಟಿಗೆ ವಿಸ್ತರಿಸಿತ್ತು. ಜೀವ ಇರುವವರೆಗೂ ಜೈಲು ಶಿಕ್ಷೆ ವಿರುದ್ಧ ಪೆರಾರಿವಾಳನ್ ಸಲ್ಲಿಸಿರುವ ಮೇಲ್ಮನವಿ ಸದ್ಯ ರಾಷ್ಟ್ರಪತಿ ಅಂಗಳದಲ್ಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ದೇಶದ 2ನೇ ಅತೀ ದೊಡ್ಡ ಶ್ರೀಮಂತ ಪಕ್ಷ ಬಿಎಸ್ ಪಿಗೆ ಹೀನಾಯ ಸೋಲು | ಮಾಯಾವತಿಜಿ ಇದು ನ್ಯಾಯವೇ?
ಪೊಲೀಸರ ಮೇಲೆ ಹೆಜ್ಜೇನು ದಾಳಿ: ಇಬ್ಬರು ಗಂಭೀರ
ಕಚ್ಚಾ ತೈಲ ಬೆಲೆಯಲ್ಲಿ ಬಾರೀ ಇಳಿಕೆ
ಪಂಚರಾಜ್ಯ ಚುನಾವಣೆ: ರಾಜ್ಯದ ಮೇಲೆ ಪರಿಣಾಮ ಬೀರಲ್ಲ; ಸಚಿವ ವಿ.ಸೋಮಣ್ಣ
ಪಂಜಾಬ್ ಸಿಎಂ ಚರಣ್ ಜಿತ್ ಸಿಂಗ್ ರಾಜೀನಾಮೆ