ರಾಜೀವ್ ಗಾಂಧಿ ಖೇಲ್‍ ರತ್ನ ಪ್ರಶಸ್ತಿಯ ಹೆಸರು ಬದಲಿಸಿದ ಪ್ರಧಾನಿ ಮೋದಿ - Mahanayaka
10:11 PM Thursday 14 - November 2024

ರಾಜೀವ್ ಗಾಂಧಿ ಖೇಲ್‍ ರತ್ನ ಪ್ರಶಸ್ತಿಯ ಹೆಸರು ಬದಲಿಸಿದ ಪ್ರಧಾನಿ ಮೋದಿ

major dhyan chand
06/08/2021

ನವದೆಹಲಿ: ಕ್ರೀಡೆಯಲ್ಲಿ ಅತ್ಯತ್ತಮ ಸಾಧನೆ ಮಾಡಿದವರಿಗೆ ನೀಡಲಾಗುವ ರಾಜೀವ್‍ಗಾಂಧಿ ಖೇಲ್‍ ರತ್ನ ಪ್ರಶಸ್ತಿಯ ಹೆಸರನ್ನು ಬದಲಾವಣೆ ಮಾಡಲಾಗಿದ್ದು, ಹಾಕಿ ಕ್ರೀಡೆಯ ಭಿಷ್ಮ ಮೇಜರ್ ದ್ಯಾನ್‍ಚಂದ್ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ.

 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ದೇಶದ ಜನರ ಅಭಿಪ್ರಾಯ ಆಧರಿಸಿ ಖೇಲ್‍ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್‍ಚಂದ್ ಖೇಲ್‍ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ.

 




ಒಲಿಂಪಿಕ್ ಕ್ರೀಡೆಯಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಸದಸ್ಯರು ಸೆಮಿಫೈನಲ್‍ವರೆಗೂ ತಲುಪಿ ವಿರೋಚಿತ್ತ ಆಟ ಆಡಿದ್ದರು. ನಮ್ಮ ಹೆಣ್ಣು ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಅವರ ಇಚ್ಚಾಶಕ್ತಿ, ಗೆಲುವಿಗೆ ತೋರಿಸಿದ ಉತ್ಸಾಹ ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕ. ಇಂದು ದೇಶವೇ ಹೆಮ್ಮೆ ಪಡುವ ದಿನ. ಖೇಲ್‍ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್‍ಚಂದ್ ಎಂದು ಮರುನಾಮಕರಣ ಮಾಡಲಾಗಿದೆ. ಕ್ರೀಡೆಯಲ್ಲಿ ಅಪೂರ್ವ ಸಾಧನೆ ಮಾಡಿದ ಧ್ಯಾನ್ ಚಂದ್‍ ರ ಹೆಸರನ್ನು ನಾಮಕರಣ ಮಾಡುವ ಮೂಲಕ ಅವರಿಗೆ ಗೌರವ ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.

 

1991ರಿಂದಲೂ ರಾಜೀವ್‍ಗಾಂಧಿ ಹೆಸರಿನ ಖೇಲ್‍ ರತ್ನವನ್ನು ಕ್ರೀಡೆಯಲ್ಲಿ ಅಪೂರ್ವ ಸಾಧನೆ ಮಾಡಿದವರಿಗೆ ನೀಡಲಾಗುತ್ತಿತ್ತು. 25 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಅದು ಒಳಗೊಂಡಿತ್ತು. ಅದರಲ್ಲಿದ್ದ ರಾಜೀವ್ ಗಾಂಧಿ ಹೆಸರನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಬದಲಾಗಿ ಮೇಜರ್ ದ್ಯಾನ್‍ಚಂದ್ ಹೆಸರನ್ನು ಸೇರಿಸಲಾಗಿದೆ.

 

ಇನ್ನಷ್ಟು ಸುದ್ದಿಗಳು…

ಎಲ್ಲ ವಿದ್ಯಾರ್ಥಿಗಳು ಪಾಸ್, ಶಿಕ್ಷಣ ಸಚಿವರು ಫೇಲ್! | ರಿ ಎಕ್ಸಾಮ್ ಬರೀತಾರಾ ಸುರೇಶ್ ಕುಮಾರ್?

ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಅನಾಥನಾಗಿದ್ದ | ಬಿಜೆಪಿ ಸೇರ್ಪಡೆಗೆ ಎನ್.ಮಹೇಶ್ ಪ್ರತಿಕ್ರಿಯೆ

ಬಿಗ್ ನ್ಯೂಸ್:  ರಾಜಕೀಯ ನಿವೃತ್ತಿ ಘೋಷಿಸಿದ ಸಂಸದ ಶ್ರೀನಿವಾಸ್ ಪ್ರಸಾದ್

ನನ್ನದು ಸ್ವಂತ ದುಡಿಮೆಯ ದುಡ್ಡು, ಹಾಗಾಗಿ ಇಡಿ ಅಧಿಕಾರಿಗಳು ವಾಪಸ್ ಹೋಗಿದ್ದಾರೆ | ಜಮೀರ್ ಅಹ್ಮದ್

ಪ್ರವಾಸಿಗರೇ ಗಮನಿಸಿ, ಮಲ್ಪೆ ಬೀಚ್ ಗೆ ಇಳಿದರೆ 500 ರೂಪಾಯಿ ದಂಡ

“ಬಡ ಮಕ್ಕಳ ಮೊಟ್ಟೆ ತಿಂದ ಜೊಲ್ಲೆಗೆ ಝೀರೋ ಟ್ರಾಫಿಕ್ ರಾಜಮರ್ಯಾದೆ!”

 

ಇತ್ತೀಚಿನ ಸುದ್ದಿ