ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕತ್ತೆ ಸಾಕಣಿಕೆ ಕೇಂದ್ರ ಸ್ಥಾಪಿಸಿದ ರಾಮನಗರದ ಶ್ರೀನಿವಾಸ್ ಗೌಡ
ರಾಜ್ಯದ ಮೊದಲ ಕತ್ತೆ ಸಾಕಣಿಕೆ ಕೇಂದ್ರ ಇತ್ತೀಚೆಗಷ್ಟೆ ದಕ್ಷಿಣ ಕನ್ನಡ ಜಿಲ್ಲೆಯ ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರ್ಲಡ್ಕದಲ್ಲಿ ಸ್ಥಾಪನೆಯಾಗಿದೆ. ಸಾಮಾನ್ಯವಾಗಿ ಕತ್ತೆ ಸಾಕಣಿಕೆ ಮಾಡಲು ಯಾರೂ ಮುಂದೆ ಬರುವುದಿಲ್ಲ. ಅಂತಹದ್ದರಲ್ಲಿ ರಾಮನಗರ ಮೂಲದ ಶ್ರೀನಿವಾಸ್ ಗೌಡ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹದ್ದೊಂದು ಸವಾಲಿನ ಕೆಲಸಕ್ಕೆ ಕೈ ಹಾಕಿದ್ದಾರೆ.
ಕೊರೋನಾ ಸಮಯದಲ್ಲಿ ಇರಾ ಗ್ರಾಮ ಪಂಚಾಯತ್ ನ ಪರ್ಲಡ್ಕದಲ್ಲಿ 2.5 ವಿಸ್ತೀರ್ಣದಲ್ಲಿ ಐಸಿರಿ ಫಾರ್ಮ್‌ನ್ನು ಸ್ಥಾಪಿಸಿದ್ದಾರೆ. ಈ ಮೊದಲು ಐಸಿರಿ ಫಾರ್ಮ್‌ನಲ್ಲಿ ಖಡಕನಾಥ ಕೋಳಿ, ಟರ್ಕಿ ಕೋಳಿ, ಕುರಿ ಹಾಗೂ ಮೇಕೆಗಳನ್ನು ಇವರು ಸಾಕುತ್ತಿದ್ದರು.
ಕತ್ತೆ ಸಾಕಣಿಕೆ ಅನ್ನೋದು ಅಷ್ಟೊಂದು ಸುಲಭದ ಮಾತಲ್ಲ. ಹಾಗಾಗಿಯೇ ಕತ್ತೆ ಸಾಕಣಿಕೆ ಕೇಂದ್ರ ಆರಂಭಿಸುವುದಕ್ಕೂ ಮೊದಲು ಶ್ರೀನಿವಾಸ್ ಗೌಡ ಅವರು, ತನ್ನ ಮೊದಲ ಗುರುಗಳಾದ ಇನ್ ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಆಯಂಡ್ ವೆಟರ್ನರಿ ಬಯಲಾಜಿಕಲ್ಸ್ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಆರ್.ಎನ್.ಶ್ರೀನಿವಾಸ್ ಗೌಡ ಹಾಗೂ ಆರ್. ಜಗನ್ನಾಥ್ ಅವರಿಂದ ಮಾಹಿತಿ ಪಡೆದುಕೊಂಡಿದ್ದು, ಈ ಕೇಂದ್ರ ಸ್ಥಾಪನೆಗೆ ಅವರಿಗೆ ಇವರೇ ಪ್ರೇರಣೆಯಾದರು.
ಕತ್ತೆ ಸಾಕಣೆಯ ಬಗ್ಗೆ ದೇಶದ ಹಲವಾರು ರಾಜ್ಯಗಳ ಮುಖಂಡರನ್ನು ಭೇಟಿ ಮಾಡಿ, ಈ ಬಗ್ಗೆ ಅಧ್ಯಯನವನ್ನು ಮಾಡಿಕೊಂಡ ಶ್ರೀನಿವಾಸ್ ಗೌಡರು ಕತ್ತೆ ಸಾಕಣೆಯನ್ನು ಇದೀಗ ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಇದೀಗ ಶ್ರೀನಿವಾಸ್ ಗೌಡ್ರ, ಐಸಿರಿ ಫಾರ್ಮ್ ನಲ್ಲಿ ಗುಜರಾತ್ ನ ಹಲರಿ ತಳಿ, ಸ್ಮೃತಿ ಗಿಡ್ಡ ಹಾಗೂ ನಾಟಿ ತಳಿಯ ಕತ್ತೆಗಳನ್ನು ಸಾಕಣೆ ಮಾಡಲಾಗುತ್ತಿದೆ ಫಾರ್ಮ್ ನಲ್ಲಿ ಸುಮಾರು 20 ಕತ್ತೆಗಳನ್ನು ಸದ್ಯ ಸಾಕಣೆ ಮಾಡಲಾಗುತ್ತಿದೆ.
ಕತ್ತೆ ಸಾಕಣೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ, ಕತ್ತೆಗಳು 24 ಗಂಟೆ ಕಾಲ ನಿದ್ದೆ ಮಾಡಲ್ಲ, ಎಷ್ಟು ಮೇವು ನೀಡಿದರೂ ಅವು ತಿನ್ನುತ್ತಲೇ ಇರುತ್ತದೆ ಎಂದು ಶ್ರೀನಿವಾಸ್ ಗೌಡ ಹೇಳುತ್ತಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನಮ್ಮ ಮೆಟ್ರೋದಲ್ಲಿ ಇನ್ನು ಮುಂದೆ ತಮಿಳುನಾಡಿಗೂ ಪ್ರಯಾಣಿಸಬಹುದು!
ಆಂಬುಲೆನ್ಸ್ ಸಿಗಲಿಲ್ಲ: ಮಗಳ ಮೃತದೇಹ ಹೆಗಲಲ್ಲಿ ಹೊತ್ತು ನಡೆದ ತಂದೆ!
ಕೋಳಿ ಸಾರಿಗಾಗಿ ಪತ್ನಿಯನ್ನು ಇರಿದುಕೊಂದ ಪಾಪಿ!
ಪ್ರವಾದಿ ವಿರುದ್ಧ ಹೇಳಿಕೆ ವಿರುದ್ಧ ಸಿಡಿದೆದ್ದ ಮುಸ್ಲಿಮರ ಪ್ರತಿಭಟನೆ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಹೇಳಿದ್ದೇನು?