ರಾಜ್ಯದಲ್ಲಿ ಬಜರಂಗದಳದವರು ಸಿಎಂ ಆಗಿದ್ದಾರೆ ಅಂತ ಅನ್ನಿಸ್ತಿದೆ: ಪ್ರಿಯಾಂಕ್ ಖರ್ಗೆ ಕಿಡಿ ನುಡಿ
ಬೆಂಗಳೂರು: ಹಲಾಲ್ ವಿವಾದದ ಬಳಿಕ ಇದೀಗ ಆಜಾನ್ ವಿವಾದವನ್ನು ಬಿಜೆಪಿ ಪರ ಸಂಘಟನೆಗಳು ಆರಂಭಿಸಿವೆ. ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಪ್ರಿಯಾಂಕ್ ಖರ್ಗೆ(Priyank Kharge) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಜರಂಗದಳ(Bajarangadal)ದವರು ಸಿಎಂ ಆಗಿದ್ದಾರೆ ಅಂತ ಅನ್ನಿಸ್ತಿದೆ. ರಾಜ್ಯದಲ್ಲಿ ಸರ್ಕಾರವೇ ಸತ್ತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನದಿಂದ ದಿನಕ್ಕೆ ಧರ್ಮದ ಹೆಸರಿನಲ್ಲಿ ಹೊಸ ಹೊಸ ವಿವಾದಗಳು ಸೃಷ್ಟಿಯಾಗುತ್ತಿವೆ. ಈಗ ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai )ಮೂಕ ಬಸವ ಆಗಿದ್ದಾರೆ. ಶಬ್ಧ ನಿಯಂತ್ರಣ ಆದೇಶ ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ. ಎಲ್ಲದಕ್ಕೂ ನ್ಯಾಯಾಂಗದ ಮಧ್ಯಸ್ಥಿಕೆಯಾದರೆ, ಸರ್ಕಾರ ಇರೋದು ಯಾಕೆ ಎಂದು ಅವರು ಪ್ರಶ್ನಿಸಿದರು.
ಧಮ್ ಇಲ್ಲದ ಸರ್ಕಾರ ಕೆಲಸಕ್ಕೆ ಬಾರದ ವಿಚಾರ ತಂದಿಟ್ಟಿದ್ದಾರೆ. ಸಿಎಂ ಬೊಮ್ಮಾಯಿ ಆರೆಸ್ಸೆಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಇನ್ನೂ ಹಲಾಲ್ ವಿವಾದಕ್ಕೆ ಸಂಬಂಧಿಸಿದಂತೆ ಇದೇ ವೇಳೆ ಪ್ರತಿಕ್ರಿಯಿಸಿರುವ ಅವರು, ಹಲಾಲ್ ಸರ್ಟಿಫಿಕೆಟ್ ಪತಾಂಜಲಿ(Pathanjali) ಮತ್ತು ಅದಾನಿ (Adani) ಕೂಡ ಪಡೆದುಕೊಂಡಿದ್ದಾರೆ ಎಂದರು.
ಮಹಾನಾಯಕ (Mahanayaka) ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಣ್ಣ ವಯಸ್ಸಲ್ಲೇ ಪ್ರೀತಿಸಿದರು, ಮದುವೆಯೂ ಆಯ್ತು, ಆದರೆ ಪ್ರಕೃತಿ ಆಟಕ್ಕೆ ದುರಂತವೇ ನಡೆದು ಹೋಯ್ತು!
ರಾಹುಲ್ ಗಾಂಧಿ ಹೆಸರಿಗೆ ತನ್ನೆಲ್ಲಾ ಆಸ್ತಿ ಬರೆದುಕೊಟ್ಟ 78ರ ವೃದ್ಧೆ!
ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಹೆಜ್ಜೇನು ದಾಳಿ: ಐವರಿಗೆ ಗಾಯ, ಮಹಿಳೆಯ ಸ್ಥಿತಿ ಗಂಭೀರ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆ ಶಾಕ್ ನೀಡಿದ ವಿದ್ಯುತ್ ಬೆಲೆ ಏರಿಕೆ!