ರಾಜ್ಯದಲ್ಲಿ ಇನ್ನೂ ಮುಂದುವರಿಯಲಿದೆ ಬೇಸಿಗೆ ಮಳೆ! - Mahanayaka
2:52 AM Thursday 21 - November 2024

ರಾಜ್ಯದಲ್ಲಿ ಇನ್ನೂ ಮುಂದುವರಿಯಲಿದೆ ಬೇಸಿಗೆ ಮಳೆ!

rain
20/03/2022

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಕರಾವಳಿ ಮತ್ತು ರಾಜ್ಯದ  ಕೆಲವು ಕಡೆ ಇನ್ನೂ ಮೂರ್ನಾಲ್ಕು ದಿನ ಮಳೆ ಬರುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಹೇಳಿಕೆ ನೀಡಿದೆ.

ಸದ್ಯ ಬಂಗಾಳಕೊಲ್ಲಿಯಲ್ಲಿನ ಉಂಟಾಗಿರುವ ಪ್ರಬಲ ವಾಯುಭಾರ ಕುಸಿತ ಮತ್ತು ಉತ್ತರ ಪ್ರದೇಶದಿಂದ ಉತ್ತರ ಕರ್ನಾಟಕದವರೆಗೆ ಮತ್ತು ವಿದರ್ಭದಿಂದ ತಮಿಳುನಾಡಿನವರೆಗೆ ಹಬ್ಬಿರುವ ಟ್ರಫ್‌, ಮಧ್ಯಪ್ರದೇಶದ ಭಾಗದಲ್ಲಿರುವ ಮೇಲ್ಮೈ ಸುಳಿಗಾಳಿ ಉಂಟಾಗಿರುವುದು ಮಳೆ ಸುರಿಯಲು ಕಾರಣವಾಗಿದೆ.

ಶನಿವಾರ ಬೆಳಗ್ಗೆ 8:30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ  ಕೊಡಗಿನ ನಾಪೊಕ್ಲು, ಶಿವಮೊಗ್ಗದ ಆನವಟ್ಟಿತಲಾ 3 ಸೆಂ.ಮೀ., ದಕ್ಷಿಣ ಕನ್ನಡದ ಬೆಳ್ತಂಗಡಿ ಮತ್ತು ಧರ್ಮಸ್ಥಳ, ಉಡುಪಿ ಮತ್ತು ಧಾರವಾಡದ ಕಲಘಟಗಿಯಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ.  ಶಿವಮೊಗ್ಗದ ತ್ಯಾಗರ್ತಿಯಲ್ಲಿ 4 ಸೆಂ.ಮೀ. ಮಳೆಯಾಗಿದೆ. ದಾವಣಗೆರೆಯಲ್ಲಿ ಕನಿಷ್ಠ 16.3 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ವರದಿಯಾಗಿದೆ. ರಾಯಚೂರಿನಲ್ಲಿ ಗರಿಷ್ಠ 41 ಸೆಂ.ಮೀ. ಉಷ್ಣಾಂಶ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…




ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಟೋಗೆ ಬಣ್ಣ ತುಂಬಿದ ಬಲೂನ್ ಎಸೆದ ಕಿಡಿಗೇಡಿ: ರಸ್ತೆಯಲ್ಲಿ ಮಗುಚಿ ಬಿದ್ದ ಆಟೋ | ವಿಡಿಯೋ ವೈರಲ್

ವಿಶ್ವದ ಅತ್ಯಂತ ಸಂತೋಷದ ದೇಶಗಳ ಪಟ್ಟಿ ಬಿಡುಗಡೆ: ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ಬಿಜೆಪಿಯಿಂದ ‘ದಿ ಕಾಶ್ಮೀರ್ ಫೈಲ್ಸ್ ‘ ಪ್ರಚಾರ ಮಾಡಿ ಗುಜರಾತ್, ರಾಜಸ್ಥಾನ್ ಚುನಾವಣೆ ಗೆಲ್ಲುವ ತಂತ್ರಗಾರಿಕೆ: ಶಿವಸೇನಾ ಮುಖಂಡ ಸಂಜಯ್ ರಾವತ್

ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು: ಕಲ್ಲಡ್ಕ ಪ್ರಭಾಕರ್‌

ಇತ್ತೀಚಿನ ಸುದ್ದಿ