ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ: ಯಾವ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ? | ಏನೇನು ನಿರ್ಬಂಧಗಳಿವೆ? - Mahanayaka

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ: ಯಾವ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ? | ಏನೇನು ನಿರ್ಬಂಧಗಳಿವೆ?

weekend curfew
05/01/2022

ಬೆಂಗಳೂರು: ಕೊವಿಡ್ ಪ್ರಕರಣಗಳು ಏಕಾಏಕಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ(ಜನವರಿ 7ರಿಂದ) ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.

ಮಂಗಳವಾರ ಸಂಜೆ ಆರಂಭವಾದ ಸಭೆಯು ರಾತ್ರಿ 9:30ರವರೆಗೆ ನಡೆಯಿತು. ಸಭೆಯ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಆರೋಗ್ಯ ಸಚಿವ  ಡಾ.ಕೆ.ಸುಧಾಕರ್ ಜಂಟಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

ಬೆಂಗಳೂರಿನಲ್ಲಿ ಶಾಲೆಗಳು ಗುರುವಾರದಿಂದ ಬಂದ್ ಆಗಲಿವೆ.  10, 11, 12ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ನಡೆಯಲಿದೆ. 1ರಿಂದ 9ರವರೆಗಿನ ವಿದ್ಯಾರ್ಥಿಗಳಿಗೆ ಹಿಂದಿನಂತೆ ಆನ್ ಲೈನ್ ತರಗತಿಗಳು ನಡೆಯಲಿವೆ. ವೈದ್ಯಕೀಯ ಅರೆ ವೈದ್ಯಕೀಯ, ನರ್ಸಿಂಗ್ ಕಾಲೇಜುಗಳು ನಡೆಯಲಿವೆ. ಪದವಿ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬೌತಿಕ ತರಗತಿಗಳು ನಡೆಯಲಿವೆ.

ರಾಜ್ಯದ ಉಳಿದ ಯಾವುದೇ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ. ತರಗತಿಗಳು ಯಥಾ ಸ್ಥಿತಿಯಲ್ಲಿ ನಡೆಯಲಿವೆ. ಅಲ್ಲದೇ ಬೇರಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಆರ್.ಅಶೋಕ್ ಹೇಳಿದರು.




ವೀಕೆಂಡ್ ಕರ್ಫ್ಯೂ: ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ವಿಧಿಸಲಾಗಿದೆ. ಹೊರ ಜಿಲ್ಲೆ ರಾಜ್ಯಗಳಿಂದ ಬರುವವರಿಗೆ ವಾಹನ ಟಿಕೆಟ್ ಇದ್ದರೆ ಯಾವುದೇ ಅಡ್ಡಿ ಇರುವುದಿಲ್ಲ. ಅನಗತ್ಯ ಓಡಾಟಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ.

ಬಸ್ ರೈಲು, ಮೆಟ್ರೋ, ಆಟೋ ಸೇವೆಗಳಿಗೆ ವಾರದ ದಿನಗಳಲ್ಲಿ ನಿರ್ಬಂಧ ವಿರುವುದಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಕರ್ಫ್ಯೂ ಅವಧಿಯಲ್ಲಿ ಹೊಟೇಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರವೇ ಅವಕಾಶ ಇರುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ 50:50 ಅನುಪಾತದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಚಿತ್ರ ಮಂದಿರ, ಬಾರ್, ಪಬ್, ರೆಸ್ಟೋರೆಂಟ್ ಗಳಲ್ಲಿ ಆಸನ ಸಾಮರ್ಥ್ಯ ಶೇ.50ರಷ್ಟು ಭರ್ತಿ ಮಾಡಲು ಅವಕಾಶ ನೀಡಲಾಗಿದೆ.

ಯಾವುದೇ ಪ್ರತಿಭಟನೆ, ಜಾತ್ರೆ, ರ್ಯಾಲಿ, ಮೆರವಣಿಗೆಗೆ ಅವಕಾಶ ಇರುವುದಿಲ್ಲ. ಈ ನಿರ್ಬಂಧ ಗುರುವಾರ ರಾತ್ರಿಯಿಂದಲೇ ಜಾರಿಯಾಗಲಿದೆ ಎಂದು ಕೆ.ಸುಧಾಕರ್ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಜರ ಕಾಲದಲ್ಲಿ ಇದ್ದ “ಆರೋಗ್ಯವೇ ಭಾಗ್ಯ” ಎಂಬುದು ಸ್ವಾತಂತ್ರ್ಯ ಸಿಕ್ಕಿ ರಾಜಕಾರಣಿಗಳ ಕೈಯಲ್ಲಿ “ಆರೋಗ್ಯವೇ ವ್ಯಾಪಾರ” ಆಗಿದೆಯೇ?

ಸಚಿವ ಮತ್ತು ಸಚಿವರ ಪತ್ನಿಯ ಕಾಲಿಗೆ ನಮಸ್ಕರಿಸಿದ ಐಎಎಸ್ ಅಧಿಕಾರಿ!

ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ: ಬೆಚ್ಚಿ ಬೀಳಿಸುತ್ತೆ ವಿಡಿಯೋ

ಬೇರೊಬ್ಬನನ್ನು ನೋಡಿದಳು ಎಂದು ಹುಡುಗಿಯನ್ನು ಕೊಂದ ಪಾಪಿ!

ಇತ್ತೀಚಿನ ಸುದ್ದಿ