ರಾಕಿ ಕಟ್ಟಿಸಿಕೊಂಡ ಹುಡುಗಿಯ ಮೇಲೆ ಲವ್: ಸ್ನೇಹಿತನನ್ನು ಮುಗಿಸಿ ಬಿಟ್ಟ ಅಣ್ಣ

akash
28/10/2021

ಕಲಬುರ್ಗಿ: ತಂಗಿಯನ್ನು ಪ್ರೀತಿಸಿದ್ದಕ್ಕೆ ಆಕೆಯ ಅಣ್ಣ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರ್ಗಿ ಹೊರವಲಯದ ಕಾಳನೂರ್ ಡಾಬಾ ಬಳಿಯಲ್ಲಿ ನಡೆದಿದ್ದು, ಪ್ರಾಣ ಸ್ನೇಹಿತರಾಗಿದ್ದ ಇವರ ನಡುವೆ ಪ್ರೀತಿ ವಿಚಾರ ಒಡಕು ಮೂಡಿಸಿತ್ತು ಎನ್ನಲಾಗಿದೆ.

21 ವರ್ಷ ವಯಸ್ಸಿನ ಆಕಾಶ್ ಹತ್ಯೆಗೀಡಾದ ಯುವಕನಾಗಿದ್ದು, ಈತ ಓಂ ನಗರ ಕಾಲನಿಯ ಗ್ಯಾರೇಜ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ಸ್ನೇಹಿತ ಶ್ರೀನಿಧಿ ಎಂಬಾತನ ತಂಗಿಯನ್ನು ಆಕಾಶ್ ಪ್ರೀತಿಸುತ್ತಿದ್ದು, ಈ ಬಗ್ಗೆ ಸಾಕಷ್ಟು ಬುದ್ಧಿ ಹೇಳಿದರೂ, ಆತ ಪ್ರೀತಿಸುವುದನ್ನು ಬಿಡಲಿಲ್ಲ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ಶ್ರೀನಿಧಿಯ ತಂಗಿಯ ಜೊತೆಗೆ ಆಕಾಶ್ ನಾಪತ್ತೆಯಾಗಿದ್ದ. ನಮ್ಮ ಮನೆಯಲ್ಲಿಯೇ ಬಂದು ಕೊಂಡು ಇದ್ದು, ನನ್ನ ತಂಗಿಯ ಕೈಯಿಂದಲೇ ರಾಖಿ ಕಟ್ಟಿಸಿಕೊಂಡು ಇದೀಗ ಆಕೆಯ ಜೊತೆಗೆ ಆಕಾಶ ಪರಾರಿಯಾಗಿರುವ ವಿಚಾರದಿಂದ ಶ್ರೀನಿಧಿ ತೀವ್ರವಾಗಿ ಆಕ್ರೋಶಗೊಂಡಿದ್ದ ಎನ್ನಲಾಗಿದೆ.

ತಂಗಿಯ ಜೊತೆಗೆ ಪರಾರಿಯಾಗಿದ್ದ ಆಕಾಶ್ ವಾಪಸ್ ಊರಿಗೆ ಬರುತ್ತಿದ್ದಂತೆಯೇ ಶ್ರೀನಿಧಿ, ಆಕಾಶ್ ನ ಹತ್ಯೆಗೆ ಸಂಚು ಹಾಕಿದ್ದಾನೆ. ಹೊರಗೆ ಸುತ್ತಾಡಿ ಬರೋಣ ಎಂದು ಆಕಾಶ್ ನನ್ನು ನಂಬಿಸಿದ್ದು, ತನ್ನ ಜೊತೆಗೆ ಕೋಪಗೊಂಡಿದ್ದ ಸ್ನೇಹಿತ ಚೆನ್ನಾಗಿ ಮಾತನಾಡಿಸಿದಾಗ ಆಕಾಶ್ ಕೂಡ ಖುಷಿಯಾಗಿದ್ದ. ಆದರೆ, ಕಲಬುರ್ಗಿ ಹೊರವಲಯದ ಕಾಳನೂರ್ ಡಾಬಾ ಬಳಿಯಲ್ಲಿ ಹತ್ಯೆ ನಡೆಸಿದ್ದಾನೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version