ರಕ್ಷಾ ಬಂಧನ ಕಟ್ಟಿ ವಾಪಸ್ ಆಗುತ್ತಿದ್ದ ವೇಳೆ ಭೀಕರ ಅಪಘಾತ: ಪತಿ, ಪತ್ನಿ, ಮಗು ದಾರುಣ ಸಾವು
ಭರತ್ ಪುರ: ರಕ್ಷಾ ಬಂಧನ ಆಚರಣೆಗಾಗಿ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಅತ್ತೆ ಮನೆಗೆ ಹೋಗಿದ್ದ ಯುವಕ, ಕಾರ್ಯಕ್ರಮ ಮುಗಿಸಿ ತನ್ನ ಮನೆಗೆ ಬೈಕ್ ನಲ್ಲಿ ವಾಪಸಾಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದು, ಪರಿಣಾಮವಾಗಿ ಮೂವರು ಕೂಡ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಭರತ್ ಪುರದಲ್ಲಿ ನಡೆದಿದೆ.
ಇಲ್ಲಿನ ಫತೇಪುರ್ ಸಿಕ್ರಿಯ ಬಂಟರೋನ್ಲಿ ನಿವಾಸಿ, ಬಬ್ಲು ಕುಶ್ವಾಹ ಹಾಗೂ ಅವರ ಪತ್ನಿ ಆರತಿ ಮತ್ತು ಮಗ ಕಾರ್ತಿಕ್ ಅಪಘಾತದಲ್ಲಿ ಬಲಿಯಾದವರಾಗಿದ್ದಾರೆ. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದಕ್ಕೆ ಬೈಕ್ ಡಿಕ್ಕಿಯಾಗಿದೆ ಎಂದು ವರದಿಯಾಗಿದೆ.
ಭಾನುವಾರ ಸಂಜೆ ರೂಪಾಸ್ ಪಟ್ಟಣದಲ್ಲಿ ನಲ್ಲಿ ಈ ಘಟನೆ ನಡೆದಿದ್ದು, ಕಾರು ಡಿಕ್ಕಿಯಾದ ಪರಿಣಾಮ ಮೂವರು ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರನ್ನು ಜಪ್ತಿ ಮಾಡಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.
ಅಲ್ವಾರ್ ಗೆ ಹೋಗಿ ತನ್ನ ಸಹೋದರಿಗೆ ರಾಖಿ ಕಟ್ಟಿದ್ದ ಬಬ್ಲಿ ಕುಶ್ವಾಹ ಸಂತಸದಿಂದ ಮನೆಯಿಂದ ಹೊರಟು ಬಂದಿದ್ದರು. ಆದರೆ, ಏಕಾಏಕಿ ನಡೆದ ಈ ಅಪಘಾತದಿಂದ ಇಡೀ ಕುಟುಂಬವೇ ಶೋಕದಲ್ಲಿ ಮುಳುಗಿದೆ. ಒಬ್ಬರು ಇಬ್ಬರಲ್ಲ ಒಂದೇ ಬಾರಿಗೆ ಮೂರು ಜೀವಗಳು ನಷ್ಟವಾಗಿದೆ. ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ.
ಇನ್ನಷ್ಟು ಸುದ್ದಿಗಳು…
ಬಿಗ್ ಬಾಸ್ ಕ್ಯಾಮರ ಮುಂದೆಯೇ ಲೈಂಗಿಕ ಕ್ರಿಯೆ ನಡೆಸಲಾಗಿದೆ | ಸ್ಪರ್ಧಿಯಿಂದ ಗಂಭೀರ ಆರೋಪ
ಹೆಣ ಅಂತ ಅಂದು ಕೊಂಡ್ರು, ಆದ್ರೆ ಅದು ಜನ! | ಪೊಲೀಸರನ್ನೇ ಬೆಚ್ಚಿಬೀಳಿಸಿದ ಭೂಪ
ಅಪ್ರಾಪ್ತ ಬಾಲಕಿಯ ಮೊಬೈಲ್ ಗೆ ಅಶ್ಲೀಲ ಚಿತ್ರ ಕಳುಹಿಸಿದ ಮಹಿಳೆ | ಮಹಿಳೆಯ ವಿಲಕ್ಷಣ ಮನಸ್ಥಿತಿಗೆ ಬೆಚ್ಚಿಬಿದ್ದ ಪೋಷಕರು
ರಮೇಶ್ ಜಾರಕಿಹೊಳಿ ಅವರ ರಕ್ಷಾ ಬಂಧನ ಆಚರಣೆ ಹೇಗಿತ್ತು ಗೊತ್ತಾ?
ದೇವಸ್ಥಾನಕ್ಕೆ ಬಂದಿದ್ದ ತಂದೆ, ತಾಯಿ, ಮಗಳು ನದಿಯಲ್ಲಿ ಕೊಚ್ಚಿ ಹೋಗಿ ಸಾವು!
ಕೊವಿಡ್ ಮಾರ್ಗಸೂಚಿಗೆ ಅಂಜದೇ ಗಣೇಶೋತ್ಸವ ನಡೆಸಲು ಶಾಸಕ ಯತ್ನಾಳ್ ಕರೆ!
ಹೃದಯ ವಿದ್ರಾವಕ ಘಟನೆ: ಬೀಡಿ ಬ್ರಾಂಚ್ ಗೆ ತೆರಳುತ್ತಿದ್ದ ಮಹಿಳೆಯರಿಗೆ ರೈಲು ಡಿಕ್ಕಿ | ಇಬ್ಬರು ಬಲಿ