ಕೊನೆಯ ಘಟ್ಟಕ್ಕೆ ರಂಝಾನ್ ಉಪವಾಸ: ಕತಾರ್ ನಲ್ಲಿ ರಾತ್ರಿ ಆರಾಧನೆಗೆ ಸಕಲ ಸಿದ್ದತೆ

ರಮಝಾನ್ ನ ಕೊನೆಯ ಹತ್ತರಲ್ಲಿ ಇಹ್ ತಿಕಾಫ್ ಗೆ ಮಸೀದಿಯಲ್ಲಿ ಬೇಕಾದ ಸೌಲಭ್ಯವನ್ನು ಕತಾರ್ ಸಿದ್ದಗೊಳಿಸಿದೆ. ಒಟ್ಟು 205 ಮಸೀದಿಗಳನ್ನು ಸಿದ್ಧಗೊಳಿಸಲಾಗಿದೆ ಕೊನೆಯ ಹತ್ತರಲ್ಲಿ ಮುಸ್ಲಿಮರು ಮಸೀದಿಯಲ್ಲಿ ನಮಾಝ್ ಕುರಾನ್ ಪಠಣ ಮತ್ತು ಪ್ರಾರ್ಥನೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ರಾತ್ರಿ ಮತ್ತು ಹಗಲಲ್ಲಿ ಆರಾಧನೆಯಲ್ಲಿ ಲೀನರಾಗ್ತಾರೆ.
ಇಹ್ ತಿ ಕಾಫ್ ಗೆ ಸಿದ್ಧಗೊಳಿಸಲಾದ ಮಸೀದಿಯ ವಿವರವನ್ನು ವೆಬ್ಸೈಟ್ನಲ್ಲಿ ದಾಖಲಿಸಲಾಗಿದೆ. ಆಸಕ್ತರು ವೆಬ್ ಸೈಟ್ ನೋಡಿಕೊಂಡು ಅಂತಹ ಮಸೀದಿಗೆ ಹೋಗಬಹುದು ಎಂದು ತಿಳಿಸಲಾಗಿದೆ
ದೋಹಾದಿಂದ ಆಲ್ಕೋರ್, ವಕ್ರ, ಶಹ ನಾಯ್, ಉಮ್ ಸಲಾಲ್ ಸಹಿತ ವಿವಿಧ ಪ್ರದೇಶಗಳಲ್ಲಿ ಇಹ್ ತಿಕಾಫ್ ಗೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ. 18 ವರ್ಷಕ್ಕಿಂತ ಕೆಳಗಿನ ಮಕ್ಕಳು ಹೆತ್ತವರೊಂದಿಗೆ ಇಹ್ ತಿಕಾಫ್ ಗೆ ಕುಳಿತುಕೊಳ್ಳಬಹುದಾಗಿದೆ.
ಮಸೀದಿ ಮತ್ತು ಪರಿಸರವನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಬಟ್ಟೆಯನ್ನು ಮಸೀದಿ ಮತ್ತು ಪರಿಸರದಲ್ಲಿ ಒಣಗುವುದಕ್ಕಾಗಿ ತೂಗು ಹಾಕಬಾರದು. ಊಟ ಮಾಡಲು ಮತ್ತು ಮಲಗಲು ನಿಗದಿಪಡಿಸಿದ ಸ್ಥಳದಲ್ಲಿಯೇ ಅವನ್ನು ಮಾಡಬೇಕು. ಮಹಿಳೆಯರಿಗೆ ಇಹ್ ತಿಕಾಫ್ ಗೆ ಅವಕಾಶ ಇಲ್ಲ ಎಂದು ಸಚಿವಾಲಯ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj